ಕನ್ಯಾ ಮರಿಯಮ್ಮನ ಜನ್ಮದಿನದ ಈ ಶುಭ ದಿನವನ್ನು ಕುಟುಂಬದ ಹಬ್ಬವೆಂದು ಆಚರಿಸಿರಿ ಎಂಬ ಸಂದೇಶವನ್ನು ಧರ್ಮಗುರುಗಳಾದ ವಿಲ್ಸನ್ ಲೋಬೋ ನೀಡಿದರು.
ಬಂಟ್ವಾಳ ಅಗ್ರಾರ್ ನ ಹೋಲಿ ಸೇವಿಯರ್ ಇಗರ್ಜಿಯಲ್ಲಿ ದಿವ್ಯ ಬಲಿಪೂಜೆಯನ್ನು ನೆರವೇರಿಸುವುದರೊಂದಿಗೆ ಸಂದೇಶವನ್ನು ನೀಡಿದರು. ಅಗ್ರಾರ್‌ನವರೇ ಆದ ವಂದನೀಯ ನವೀನ್ ಪ್ರಕಾಶ್ ಡಿಸೋಜ ಇಗರ್ಜಿಯ ಮುಖ್ಯ ಗುರುಗಳೊಂದಿಗೆ ದಿವ್ಯ ಬಲಿಪೂಜೆಯಲ್ಲಿ ಭಕ್ತಾಭಿಮಾನಿಗಳೊಂದಿಗೆ ಪಾಲ್ಗೊಂಡರು. ಬಲಿ ಪೂಜೆಯ ಮುಂಚೆ ಲೂರ್ಡ್ ಮಾತೆಯ ಗ್ರೊಟ್ಟೊ ಬಳಿ ಹೊಸ ಭತ್ತದ ತೆನೆಯನ್ನು ವಂದನೀಯ ಗುರು ಗ್ರೆಗೊರಿ ಡಿಸೋಜ ಇವರು ಆಶೀರ್ವದಿಸಿ, ಮಕ್ಕಳು ತಂದ ಹೂಗಳನ್ನು ಅಭಿಷೇಕ ಮಾಡಿ ಅಲಂಕೃತ ವಾಹನದಲ್ಲಿ ಮರಿಯಮ್ಮ ಮಾತೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ಗಾಯನದೊಂದಿಗೆ ಭಕ್ತಿಪೂರ್ವಕವಾಗಿ ತರಲಾಯಿತು. ಈ ಹಬ್ಬಕ್ಕೆ ಕಳೆದ ಒಂಭತ್ತು ದಿನಗಳ ನೊವೆನವನ್ನು ಹಮ್ಮಿಕೊಳ್ಳಲಾಗಿದ್ದು, ಮರಿಯಮ್ಮನಿಗೆ ಹೂವುಗಳನ್ನು ಅರ್ಪಿಸುವುದರೊಂದಿಗೆ ಅರ್ಥಪೂರ್ಣವಾಗಿ ತಯಾರಿಯನ್ನು ಮಾಡಲಾಯಿತು.
Be the first to comment on "ಬಂಟ್ವಾಳ ಅಗ್ರಾರ್ ಚರ್ಚ್ನಲ್ಲಿ ಕನ್ಯಾ ಮರಿಯಮ್ಮನ ಜನ್ಮದಿನ ಆಚರಣೆ"