ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಪೇಟ್ರಿಯೋಟಿಸಂ ಅಂಡ್ ನೇಶನ್ ಬಿಲ್ಡಿಂಗ್ ಅನ್ನುವ ವಿಷಯದ ಬಗ್ಗೆ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದ ಸ್ಪರ್ಧೆಯನ್ನು ಬಂಟ್ವಾಳ – ಕಾಮಾಜೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆಪ್ಟಂಬರ್ 22ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
19ರಿಂದ 29ರವರೆಗಿನ ಪ್ರಾಯದ ಯುವಕ ಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಬಂಟ್ವಾಳ ತಾಲೂಕಿನ ಆಸಕ್ತರು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಬಂದು ಭಾಗವಹಿಸಬಹುದು. ಹೆಸರನ್ನು ಸೆ. 18ರ ಒಳಗೆ ಡಾ. ಗಿರೀಶ ಭಟ್, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ, ಜೋಡುಮಾರ್ಗ-574219 ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿವರಗಳಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು: ಡಾ. ಗಿರೀಶ ಭಟ್: 9901413974, ಕೀರ್ತಿರಾಜ್: 8105083820, 9743204071


Be the first to comment on "ಪೇಟ್ರಿಯೋಟಿಸಂ ಅಂಡ್ ನೇಶನ್ ಬಿಲ್ಡಿಂಗ್ : ಸೆಪ್ಟಂಬರ್ 22ರಂದು ಸ್ಪರ್ಧೆ"