ಅಂತರಾಷ್ಟೀಯ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ ಜೋಡುಮಾರ್ಗ ನೇತ್ರಾವತಿ ಜೇಸೀ ಸಪ್ತಾಹ -2018 ಸೆಪ್ಟೆಂಬರ್ 9 ರಿಂದ 15 ರವರೆಗೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ತರಬೇತಿ, ಆರೋಗ್ಯ ಶಿಬಿರ ಹಾಗೂ ಸ್ಪರ್ಧೆಗಳು ನಡೆಯಲಿದೆ.
ಭಾನುವಾರ ಬೆಳಗ್ಗೆ 9.30ಕ್ಕೆ ಜೇಸೀ ಸಪ್ತಾಹದ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ದಿನದ ಅಂಗವಾಗಿ ‘ಪರಿಸರ ದಿನ ‘ ಶ್ರೀ ಲಕ್ಷ್ಮೀ ವಿಷ್ಣು ಮೂರ್ತಿ ದೇವಸ್ಥಾನ ಕಳ್ಳಿಗೆಯಲ್ಲಿ ನಡೆಯಲಿದೆ. ಸಪ್ತಾಹದ ಉದ್ಘಾಟನೆಯನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ನೆರವೇರಿಸಲಿದ್ದಾರೆ ವೈ ಆರ್ ದಾಮ್ಲೆ ಅಧ್ಯಕ್ಷತೆ ವಹಿಸಲಿದ್ದಾರೆ . ಅತಿಥಿಗಳಾಗಿ ಸದಾಶಿವ ಆಚಾರ್, ಜೇಸೀ ಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷ ರಾದ ಸವಿತಾ ನಿರ್ಮಲ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ , ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್ ಬಿ ಶೆಟ್ಟಿ ಭಾಗವಹಿಸಲಿದ್ದಾರೆ.
ಸಾವಯವ ಕೃಷಿ ಮಾಹಿತಿ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಐ. ಕುಶಾಲಪ್ಪ ಗೌಡ ಬೆಳ್ತಂಗಡಿ ನಡೆಸಿ ಕೊಡಲಿದ್ದಾರೆ. ಎರಡನೇ ದಿನ ಶಿಕ್ಷಣ ದಿನದ ಅಂಗವಾಗಿ ಸೆಪ್ಟೆಂಬರ್ 10ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪೂಂಜಾಲಕಟ್ಟೆಯಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಲಿದೆ. ಅದೇ ದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ’ ಗುಡ್ ಟಚ್ ಬ್ಯಾಡ್ ಟಚ್ ಮಾಹಿತಿ ಕಾರ್ಯಾಗಾರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ಪುಷ್ಪಲತಾ ನೀಡಲಿದ್ದಾರೆ. ದಿನಾಂಕ 11ರಂದು ಬೆಳಿಗ್ಗೆ 9.30ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಕೊಡಂಗೆಯಲ್ಲಿ ರಕ್ತ ವರ್ಗೀಕರಣ ಶಿಬಿರ ನಡೆಯಲಿದೆ. ಸಂಜೆ 2 ಗಂಟೆಗೆ ಮಾದಕ ದ್ರವ್ಯ ವ್ಯಸನ ಜಾಗೃತಿ ಮಾಹಿತಿ ಕಾರ್ಯಾಗಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಬಿ ಮೂಡದಲ್ಲಿ ಸಂಪನ್ಮೂಲ ವ್ಯಕ್ತಿ ಜಯರಾಮ ಪೂಜಾರಿ ನಡೆಸಿಕೊಡಲಿದ್ದಾರೆ .
ಸೆಪ್ಟೆಂಬರ್ ರಂದು ತೃತೀಯ ದಿನದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆತ್ತರಕೆರೆ ಇಲ್ಲಿ ಕಣ್ಣು ತಪಾಸಣೆ ಶಿಬಿರ ನಡೆಯಲಿದೆ. ಸೆಪ್ಟೆಂಬರ್ 14ರಂದು ಮಧ್ಯಾಹ್ನ 1 ರಿಂದ ಮಹಿಳಾ ದಿನದ ಅಂಗವಾಗಿ ಲಿಂಗ ಸಮಾನತೆ ಮತ್ತು ಆರೋಗ್ಯ, ನೈರ್ಮಲ್ಯ ಬಗ್ಗೆ ಮಾಹಿತಿ ಕಾರ್ಯಾಗಾರ ವನ್ನು ಸುಧಾ ಜೋಶಿ ಶಿಶು ಅಭಿವೃದ್ಧಿ ಯೋಜನಾದಿಕಾರಿ ವಿಟ್ಲ ನಡೆಸಿಕೊಡಲಿದ್ದಾರೆ.
ಸೆಪ್ಟೆಂಬರ್ 15 ರಂದು ‘ ಜಲ ಸಂರಕ್ಷಣೆ ದಿನ ‘ದ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಮಾಜೆಯಲ್ಲಿ ನೀರಿನ ಪ್ರಾಮುಖ್ಯತೆ- ಮಿತ ಬಳಕೆ ವಿಷಯದಲ್ಲಿ ರಘರಾಮ್ ಪ್ರಭು ಬೆಳ್ತಂಗಡಿ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಮಧ್ಯಾಹ್ನ 2 ರಿಂದ ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ ಪೃಥ್ವಿ ಯ ಭವಿಷ್ಯ ನಮ್ಮ ಕೈಯಲ್ಲಿ ಎಂಬ ವಿಷಯದಲ್ಲಿ ಚಿತ್ರ ಕಲಾ ಸ್ಪರ್ಧೆ ಯನ್ನು 1ರಿಂದ 4,. 5 ರಿಂದ 7 ಹಾಗೂ 8 ರಿಂದ 10 ನೇ ತರಗತಿ ವಿದ್ಯಾರ್ಥಿ ಗಳಿಗೆ ಆಯೋಜಿಸಿದೆ. ಸಂಜೆ 3 ಗಂಟೆಗೆ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಾನಪದ ಶೈಲಿಯ ನೃತ್ಯ ಸ್ಪರ್ಧೆ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಫಿಲ್ಮ್ ಡಾನ್ಸ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು ಗರಿಷ್ಠ 6 ಜನರ ತಂಡದ ಗುಂಪು ವಿಭಾಗದಲ್ಲಿ ನಡೆಯಲಿದ್ದು ಪ್ರಥಮ 3000 ದ್ವಿತೀಯ 2000 ಹಾಗೂ ತ್ರತೀಯ 1000 ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ಭಾಗವಹಿಸಿದ ವಿದ್ಯಾರ್ಥಿ ಗಳಿಗೆ ನೀಡಲಾಗುವುದು. ಪೊಟೋಜೆನಿಕ್ ಬೇಬಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು 5 ವರ್ಷದ ಒಳಗಿನ ಮಕ್ಕಳಿಗೆ 6×4 ಗಾತ್ರದ ಕಲರ್ ಭಾವಚಿತ್ರ ವನ್ನು ಮಗುವಿನ ಹೆಸರು, ಪ್ರಾಯ , ಪೋಷಕರ ಹೆಸರು , ವಿಳಾಸ ಮೊಬೈಲ್ ಸಂಖ್ಯೆಯೊಂದಿಗೆ ದಿನಾಂಕ ಸೆ.14ರ ಮೊದಲು ಪಿಂಕಿ ಸ್ಟುಡಿಯೊ ಪದ್ಮಾ ಕಾಂಪ್ಲೆಕ್ಸ್ ಬಿಸಿರೋಡ್ ಇಲ್ಲಿಗೆ ತಲುಪಿಸತಕ್ಕದ್ದು .
ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ, ಬಹುಮಾನ ವಿತರಣೆ ಸಮಾರಂಭ ಸೆಪ್ಟೆಂಬರ್ 15 ರಂದು ಸಂಜೆ 6.30ಗಂಟೆಗೆ ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ ಬಂಟ್ವಾಳದ ಶಾಸಕರಾದ ರಾಜೇಶ್ ನಾಯಕ್ ಉಳೇಪಾಡಿಗುತ್ತು ಹಾಗೂ ರೋಟರಿ , ಲಯನ್ಸ್ ಕ್ಲಬ್ ಅಧ್ಯಕ್ಷರ ಸಮ್ಮುಖ ದಲ್ಲಿ ಜರುಗಲಿದೆ ಎಂದು ಜೇಸೀ ಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷ ರಾದ ಸವಿತಾ ನಿರ್ಮಲ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
Be the first to comment on "ಜೇಸೀ ಐ ಜೋಡುಮಾರ್ಗ ನೇತ್ರಾವತಿಯ ಸಪ್ತ ಲಹರಿ ಜೇಸೀ ಸಪ್ತಾಹ -2018"