ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ ಬೆಳಗ್ಗೆ ಇಲ್ಲಿನ ಮಿನಿ ವಿಧಾನಸೌಧಕ್ಕೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಿನಿ ವಿಧಾನಸೌಧದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಮಸ್ಯೆ ಇದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಆಗಮಿಸಿದ್ದೇನೆ. ಇದೇ ಸಂದರ್ಭ ಮಿನಿ ವಿಧಾನಸೌಧದೊಳಗಿನ ನಾನಾ ಸರಕಾರಿ ಕಚೇರಿಗಳನ್ನು ವೀಕ್ಷಿಸಿದ್ದು, ಅಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಜನರ ಕಾರ್ಯಗಳನ್ನು ನಡೆಸಲು ಉಂಟಾಗುವ ತೊಡಕುಗಳನ್ನು ಪರಿಶೀಲಿಸಿದ್ದೇನೆ. ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಶಾಸಕನ ನೆಲೆಯಲ್ಲಿ ಮಾಡಬಹುದಾದ ಪ್ರಯತ್ನಗಳನ್ನು ನಡೆಸುತ್ತೇನೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.
ಆಗಾಗ್ಗೆ ವಿದ್ಯುತ್ ವ್ಯತ್ಯಯವಾಗುವ ಕುರಿತು ಗಮನ ಸೆಳೆದ ತಹಶೀಲ್ದಾರ್ ಪುರಂದರ ಹೆಗ್ಡೆ, ಡೀಸೆಲ್ ಗೆ ತಗಲುವ ವೆಚ್ಚದ ಕುರಿತು ತಿಳಿಸಿದರು. ಈ ಸಂದರ್ಭ ಸೋಲಾರ್ ಅಳವಡಿಕೆ ಮಾಡುವ ವಿಚಾರವನ್ನೂ ಶಾಸಕರು ಪ್ರಸ್ತಾಪಿಸಿ, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭ ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು ಸಹಿತ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಶಾಸಕರ ಜತೆಗಿದ್ದರು.
Be the first to comment on "ಮಿನಿ ವಿಧಾನಸೌಧಕ್ಕೆ ಶಾಸಕ ದಿಢೀರ್ ಭೇಟಿ, ಪರಿಶೀಲನೆ"