ಬದುಕಿನ ವಿವಿಧ ಮಜಲುಗಳಲ್ಲಿ ನಾವು ಅಸಹಾಯಕರಾದ ಸನ್ನಿವೇಶದಲ್ಲಿ ಶ್ರೀಕೃಷ್ಣನ ಬದುಕು ಜೀವನಪಾಠವಾಗಿ ಹೊಸ ದಿಕ್ಕು ನೀಡುತ್ತದೆ. ಶ್ರೀಕೃಷ್ಣನ ಬಾಲ್ಯದಿಂದ ನಿರ್ಯಾಣದವರೆಗಿನಜೀವನ ಹಾಗೂ ಅದರಲ್ಲಿ ಬರುವ ಸನ್ನಿವೇಶಗಳು ನಮ್ಮ ಬದುಕಿಗೆ ಮಾರ್ಗದರ್ಶಿ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಬಂಟ್ವಾಳ ನ್ಯೂಸ್ ಸಂಪಾದಕ ಹರೀಶ ಮಾಂಬಾಡಿ ಹೇಳಿದರು.
ಸ್ನೇಹಾಂಜಲಿ ಸೇವಾ ಸಂಘ ಅಜ್ಜಿಬೆಟ್ಟು ಬಿ. ಸಿ. ರೋಡ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರುಗಿದ 26 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಗವದ್ಗೀತೆ ಎನ್ನುವುದು ಬದುಕೇ ಬೇಡ ಎಂದು ಅಸಹಾಯಕ ಸನ್ನಿವೇಶದಲ್ಲಿರುವವರಿಗೆ ದಿಕ್ಕೇ ತೋಚದವರಿಗೆ ಮಾರ್ಗದರ್ಶಿಯಾಗುತ್ತದೆ. ಎಲ್ಲರೂ ಭಗವದ್ಗೀತೆ ಯನ್ನು ಅದನ್ನು ಅರ್ಥೈಸಿಕೊಳ್ಳಬೇಕಾದದ್ದು ಪ್ರಸ್ತುತ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಡವರು ಮತ್ತು ಶ್ರೀಮಂತರ ನಡುವಿನ ಬೇಧಗಳನ್ನು ತೊಡೆದು ಹಾಕಿ, ಜನಸಾಮಾನ್ಯನಾಗಿ ಬೆಳೆದು ಬಂದ ಶ್ರೀಕೃಷ್ಣನ ಜೀವನ ಪದ್ಧತಿ ಗಮನಾರ್ಹ ಎಂದರು. ಅರಸೊತ್ತಿಗೆಯೆಡೆ ಆಕರ್ಷಿತನಾಗದೆ, ಜನಸಾಮಾನ್ಯರಾದ ಕುಚೇಲ, ವಿದುರನಂಥವರ ಬಳಿ ಆಪ್ತನಾಗಿದ್ದ ಕೃಷ್ಣನ ರಾಜಕೀಯ ಜಾಣ್ಮೆಗಳು ಇಂದಿನ ರಾಜಕಾರಣಕ್ಕೂಅನಸರಣೀಯ ಎಂದು ಹೇಳಿದ ರೈ, ಶ್ರೀಕೃಷ್ಣ ಎಲ್ಲ ಮಕ್ಕಳಲ್ಲೂ ಇದ್ದಾನೆ. ಪ್ರತಿಯೊಬ್ಬ ಜೀವರಾಶಿಗಳಲ್ಲೂ ಕೃಷ್ಣನನ್ನುಕಾಣುವುದು ಕೃಷ್ಣಜಯಂತಿ ವಿಶೇಷ ಎಂದರು. ಹಿಂದೆಲ್ಲ ಬಡವರು ಶ್ರೀಕೃಷ್ಣಜಯಂತಿಯಂಥ ಹಬ್ಬಗಳ ಆಚರಣೆಗೆ ಕಷ್ಟಪಡುವ ಸ್ಥಿತಿ ಇತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಸಮಾನವಾಗಿ ಸಾಮೂಹಿಕವಾಗಿ ಆಚರಣೆ ನಡೆಸುತ್ತಿರುವುದು ಪ್ರಗತಿಯ ಸಂಕೇತ ಎಂದು ರೈ ವಿಶ್ಲೇಷಿಸಿದರು.
ಶ್ರೀಕೃಷ್ಣ ಜಯಂತಿಯನ್ನು ನಡೆಸುವುದಕ್ಕೆ ಮಹಾರಾಷ್ಟ್ರ ಸರಕಾರ ನೆರವು ನೀಡುತ್ತಿರುವುದನ್ನು ಉಲ್ಲೇಖಿಸಿದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಸುರೇಶ್ ಪೂಜಾರಿ, ಇಂದು ಬದುಕಿಗೆ ಪೂರಕವಾದ ಅಂಶಗಳು ಕೃಷ್ಣನಿಂದ ಅರಿಯಲು ಸಾಧ್ಯಎಂದರು.
ಬಂಟ್ವಾಳ ವಿಧಾನ ಸಭಾಕ್ಷೇತ್ರದ ಶಾಸಕ ಯು. ರಾಜೇಶ್ ನಾಯ್ಕ್ , ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು.
ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷ ಉದಯ ಅಮೀನ್ ಉಪಸ್ಥಿತರಿದ್ದರು.
ಕೃಷ್ಣಾಷ್ಟಮಿಯ ಪ್ರಯುಕ್ತ ಜರುಗಿದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಎಸ್ .ಎಸ್. ಎಲ್. ಸಿ. ಹಾಗೂ ಪಿ. ಯು. ಸಿ. ಯಲ್ಲಿಅತ್ಯಧಿಕ ಅಂಕ ಗಳಿಸಿದ ಸ್ಥಳೀಯ ಪ್ರತಿಭೆಗಳನ್ನು ಗೌರವಿಸಲಾಯಿತು.
ಆದಿಶ್ರೀ ಪ್ರಾರ್ಥಿಸಿದರು. ಪ್ರಣಾಮ್ ಸ್ವಾಗತಿಸಿದರು, ನಿಕಟಪೂರ್ವ ಅಧ್ಯಕ್ಷ ನಾಗೇಶ್ ಎಮ್ ಪ್ರಸ್ತಾವನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಜಯಂತ ಅಗ್ರಬೈಲು ಆಟೋಟ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿಓದಿದರು. ಲಕ್ಷ್ಮಣ್ ಅಗ್ರಬೈಲ್ ಧನ್ಯವಾದ ನೀಡಿದರು. ರಾಜೇಶ್ ಸುವರ್ಣ, ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ:
ಅಜ್ಜಿಬೆಟ್ಟು ಶಾಲಾ ಮೈದಾನದಲ್ಲಿ ನಡೆದ ೨೬ ನೇ ವರ್ಷದ ಮೊಸರು ಕುಡಿಕೆ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಮೊಂಡೋವಿ ಮೋಟಾರ್ಸ್ ನ ಪ್ರಾಂತ್ಯಾಧಿಕಾರಿ ಸುಜಿತ್‌ಕುಮಾರ್ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು. ಅಜ್ಜಿಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಕುಶಲ ದೀಪ ಬೆಳಗುವುದರ ಸಮಾರಂಭ ಉದ್ಘಾಟಿಸಿದರು. ಅಜ್ಜಿಬೆಟ್ಟು ಶಾಲಾಭಿವೃದ್ದಿ ಸಮಿತಿಯಅಧ್ಯಕ್ಷ ಬಿ.ಶ್ರೀಧರ ಅಮೀನ್‌ಅಧ್ಯಕ್ಷತೆ ವಹಿಸಿದ್ದರು.ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ ಉದಯ ಅಮೀನ್‌ಅಜ್ಜಿಬೆಟ್ಟು ಸ್ವಾಗತಿಸಿದರು, ಕಾರ್ಯದರ್ಶಿ ಜಯಂತ್ ಅಗ್ರಬೈಲು ವಂದಿಸಿದರು. ಉದ್ಘಾಟನಾ ಸಮಾರಂಭ ಬಳಿಕ ಅಕ್ಕಮಹಾದೇವಿ ಶಿಶುಮಂದಿರದ ಚಿಣ್ಣರಿಂದ ನೃತ್ಯ ಕಾರ್ಯಕ್ರಮ ಜರುಗಿತು. ಸಂಜೆ ವೈಭವದ ಮೆರವಣಿಗೆ ಇತ್ತು.
Be the first to comment on "ಶ್ರೀಕೃಷ್ಣನ ಬದುಕು ಜೀವನ ಪಾಠ, ಮಾರ್ಗದರ್ಶಿ"