www.bantwalnews.com – ಸಂಪಾದಕ: ಹರೀಶ ಮಾಂಬಾಡಿ
23 ವಾರ್ಡುಗಳಿದ್ದಾಗ ಬಿಜೆಪಿ 5 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ನಾಲ್ಕು ಸೀಟುಗಳು ಜಾಸ್ತಿ. ಬಿಜೆಪಿಯ ಸದಸ್ಯ ಬಲವೂ ವೃದ್ಧಿಯಾಗಿದೆ. ಸೋಮವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಒಟ್ಟು 27 ಸದಸ್ಯರ ಪೈಕಿ ಬಿಜೆಪಿಯಿಂದ 11, ಕಾಂಗ್ರೆಸ್ ನಿಂದ 12, ಎಸ್.ಡಿ.ಪಿ.ಐ.ನಿಂದ 4 ಸದಸ್ಯರು ಗೆದ್ದಿದ್ದಾರೆ. ಇದು ಗಮನಾರ್ಹ ಸಾಧನೆ ಎನ್ನುತ್ತಾರೆ ಬಂಟ್ವಾಳನ್ಯೂಸ್ ಜೊತೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ.
ಬಿಜೆಪಿಯಿಂದ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಗಳಿಸಿರುವ ಎ.ಗೋವಿಂದ ಪ್ರಭು ಜಯದ ನಗೆ ಬೀರಿ ಏಳನೇ ಬಾರಿ ಪುರಸಭೆ ಪ್ರವೇಶಿಸಲಿದ್ದಾರೆ. ಅವರೊಂದಿಗೆ ಪುರಸಭೆಯಲ್ಲಿ ಕುಳಿತುಕೊಳ್ಳುವವರು ಎಲ್ಲರೂ ಹೊಸಬರೇ. ಅವರ ಪೈಕಿ, ವಿದ್ಯಾವತಿ ಪ್ರಮೋದ್ ಕುಮಾರ್ ಬಹಳ ಹಿಂದೆ ಪಟ್ಟಣ ಪಂಚಾಯತ್ ಸದಸ್ಯೆಯಾಗಿದ್ದವರು. ಜನಪ್ರತಿನಿಧಿಯಾಗಿ ಅನುಭವಿ. ಹೀಗಾಗಿ ಬಿಜೆಪಿ ಟೀಮ್ ಗೆ ಗೋವಿಂದ ಪ್ರಭುಗಳೇ ಲೀಡರ್.
ಬಿಜೆಪಿ ಗೆದ್ದ ವಾರ್ಡುಗಳು ಇವು.
ವಾರ್ಡ್ 3 -ಮಣಿ: ಮೀನಾಕ್ಷೀ ಜೆ .ಗೌಡ (ಬಿಜೆಪಿ).
ವಾರ್ಡ್ 4-ಕಾಲೇಜು ರಸ್ತೆ: ರೇಖಾ ರಮಾನಾಥ ಪೈ (ಬಿಜೆಪಿ).
ವಾರ್ಡ್ 6-ಹೊಸ್ಮರ್: ದೇವಕಿ ಶಿವಪ್ಪ ಪೂಜಾರಿ (ಬಿಜೆಪಿ).
ವಾರ್ಡ್ 7-ಬಂಟ್ವಾಳ ಪೇಟೆ: ಶಶಿಕಲಾ ಪ್ರಭಾಕರ್ (ಬಿಜೆಪಿ),
ವಾರ್ಡ್ 9-ಭಂಡಾರಿಬೆಟ್ಟು: ಹರಿಪ್ರಸಾದ್ (ಬಿಜೆಪಿ).
ವಾರ್ಡ್ 10-ಕಾಮಾಜೆ: ಶೋಭಾ ಹರಿಶ್ಚಂದ್ರ (ಬಿಜೆಪಿ).
ವಾರ್ಡ್ 11-ಸಂಚಯಗಿರಿ: ಜಯಂತಿ ವಸಂತ ಕುಲಾಲ್ (ಬಿಜೆಪಿ).
ವಾರ್ಡ್ 12-ಅಜ್ಜಿಬೆಟ್ಟು: ವಿದ್ಯಾವತಿ ಪ್ರಮೋದ್ ಕುಮಾರ್ (ಬಿಜೆಪಿ).,
ವಾರ್ಡ್ 15-ಎಪಿಎಂಸಿ ಕೈಕುಂಜೆ: ಅರ್ಲ ಗೋವಿಂದ ಪ್ರಭು (ಬಿಜೆಪಿ),
ವಾರ್ಡ್ 22-ಪಲ್ಲಮಜಲು: ಚೈತನ್ಯ ಎ.ದಾಸ್ (ಬಿಜೆಪಿ)
ವಾರ್ಡ್ 27-ಬೊಂಡಾಲ: ಜಯರಾಮ ನಾಯ್ಕ (ಬಿಜೆಪಿ)
Be the first to comment on "ಸ್ಥಾನ ಬಲ ಏರಿಸಿಕೊಂಡ ಬಿಜೆಪಿ – ಬಂಟ್ವಾಳ ಪುರಸಭೆಯಲ್ಲೀಗ 11 ಸದಸ್ಯರು"