ಅಡಕೆ ಬೆಳೆಗಾರರು ಕೊಳೆರೋಗದಿಂದ ಅಪಾರ ಪ್ರಮಾಣದಲ್ಲಿ ನಷ್ಟಕ್ಕೊಳಗಾಗಿದ್ದು, ಎಕರೆಗೆ 7 ಲಕ್ಷರೂ.ನಂತೆ ಬೆಳೆ ಪರಿಹಾರ ಒದಗಿಸುವಂತೆ ಸರಕಾರವನ್ನು ಒತ್ತಾಯಿಸಿ ಸಾಮೂಹಿಕವಾಗಿ ಮನವಿ ಸಲ್ಲಿಸಲು ಬಂಟ್ವಾಳ ತಾಲೂಕು ರೈತಸಂಘ ಹಸಿರುಸೇನೆಯ ವಿಶೇಷ ಸಭೆಯಲ್ಲಿ ನಿರ್ಧರಿಸಲಾಯಿತು.
ಬಿ.ಸಿ.ರೋಡಿನ ಬ್ರಾಹ್ಮಣ ಪರಿಷತ್ ಸಭಾಭವನದಲ್ಲಿ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಸೆ..4 ರಂದು ತಹಶೀಲ್ದಾರರು, ಜಿಲ್ಲಾಧಿಕಾರಿ, ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ, ಪದಾಧಿಕಾರಿಗಳಾದ ಮುರುವ ಮಹಾಬಲ ಭಟ್, ಎನ್.ಕೆ.ಇದ್ದಿನಬ್ಬ, ಬಿ.ಸುದೇಶ್ ಮಯ್ಯ, ಭಾಸ್ಕರ, ರೋನಾಲ್ಡ್ ಡಿಸೋಜ, ಅಬ್ದುಲ್ ರಹಿಮಾನ್, ಚಂದ್ರಶೇಖರ ಶೆಟ್ಟಿ ಮೊದಲಾದವರಿದ್ದರು.
Be the first to comment on "ಎಕರೆಗೆ 7 ಲಕ್ಷ. ರೂಗಳಂತೆ ಪರಿಹಾರ: ರೈತಸಂಘ, ಹಸಿರು ಸೇನೆ ಒತ್ತಾಯ"