ಮತ್ತೆ ಸ್ಥಳೀಯ ಸಂಸ್ಥೆಗಳಿಗೆ ದಿನಾಂಕ 31.08.18ರಂದು ಚುನಾವಣೆ ನಡೆಯುತ್ತಿದೆ, ಪಕ್ಷದ ನೆಲೆಯಿಂದ ಅಭ್ಯರ್ಥಿಗಳು ನಿಮ್ಮ ಮನೆ ಬಾಗಿಲಿಗೆ ಮತಭಿಕ್ಷೆಗಾಗಿ ದೌಡಾಯಿಸುತ್ತಿದ್ದಾರೆ. ಆದರೆ, ಯಾರ ಕುರಿತೂ ಅನುಕಂಪ ಬೇಡ, ಭಾವುಕತನ ಬೇಡ. ನಮಗೆ ಬೇಕಾಗಿರುವುದು ಅಭಿವೃದ್ಧಿ ಅಭಿವೃದ್ಧಿ ಅಭಿವೃದ್ಧಿ.
ಹಾಗಾದರೆ ನೀವು ಮಾಡಬೇಕಾದುದೇನು?
ಈ ಕುರಿತು ಬಂಟ್ವಾಳ ಜೋಡುಮಾರ್ಗ ಕೈಕಂಬದ ಸರಿದಂತರ ಪ್ರಕಾಶನ ಈ ಸಲಹೆಗಳನ್ನು ನೀಡಿದೆ. ಪ್ರೊ. ರಾಜಮಣಿ ರಾಮಕುಂಜ ಅವರು ಪ್ರಕಾಶನದ ರೂವಾರಿ.
- ಜಾತಿ, ಮತವನ್ನು ಮೀರಿದ ಉತ್ತಮ ವ್ಯಕ್ತಿ
- ಶುದ್ಧ ಚಾರಿತ್ರ್ಯವಂತ
- ಮತದಾರರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳುವ
- ನಮ್ಮ ಅಹವಾಲುಗಳಿಗೆ ತಕ್ಷಣ ಸ್ಪಂದಿಸುವ
- ತಿಂಗಳಿಗೆ ಒಂದು ಸಲವಾದರೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಖುದ್ದಾಗಿ ಅರಿತುಕೊಳ್ಳುವ
- ಅಧಿಕಾರವನ್ನು ಸೇವೆಗಾಗಿ ಇರುವ ಅವಕಾಶ ಎಂದು ಭಾವಿಸುವ
- ಮತದಾರರೇ ಪ್ರಭುಗಳು, ನಾವು ಸೇವಕರು ಎಂದು ಭಾವಿಸುವ
- ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛ ಬಂಟ್ವಾಳದ ಕಲ್ಪನೆಯನ್ನು ಸಾಕಾರಗೊಳಿಸುವ
ಅಭ್ಯರ್ಥಿಗಳನ್ನೇ ಆರಿಸಿ.
- ಈ ಹಿಂದಿನ ಅನುಭವಗಳೊಂದಿಗೆ ನಿಮ್ಮ ಅಭ್ಯರ್ಥಿಯನ್ನು ತೂಗಿ ನೋಡಿ ಮತದಾನ ಮಾಡಿ.
- ಒದಗಿ ಬರುವ ಸೌಲಭ್ಯಗಳನ್ನು ದುರುಪಯೋಗಪಡಿಸುವ ಅಥವಾ ತಮ್ಮಸ್ವಾರ್ಥಕ್ಕೆ ಮತ್ತು ಸ್ವಹಿತಕ್ಕೆ ಬಳಸಿಕೊಳ್ಳುವವರು ಬೇಡವೇ ಬೇಡ.
- ಸಣ್ಣ ಪುಟ್ಟ ಕೆಲಸಗಳಿಗೂ ತಮ್ಮ ಫೊಟೊ ಸಮೇತ ಅಭಿನಂದನಾ ಪ್ಲೆಕ್ಸ್ ಹಾಕಿಕೊಳ್ಳುವವರು ಬೇಕಾಗಿಯೇ ಇಲ್ಲ, ಯಾಕಂದ್ರೆ, ಅದು ನಮ್ಮ ತೆರಿಗೆಯ ಹಣ, ಕೆಲಸ ಮಾಡಿಸಬೇಕಾಗಿರುವುದು ಅವರ ಜವಾಬ್ದಾರಿ.
- ನೀವು ನೀಡುವ ಒಂದೊಂದು ಮತಗಳೂ ಕೂಡ ನಿಮ್ಮ ತೆರಿಗೆಯ ಹಣದ ರಕ್ಷಣೆಗಾಗಿ, ಅದರ ಸದುಪಯೋಗಕ್ಕಾಗಿ, ಸಮರ್ಥ ಅಭ್ಯರ್ಥಿಗಾಗಿ, ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ.
- ಮತದಾನ ನಿಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ.
Be the first to comment on "ಓಟು ಹಾಕುವ ಮುನ್ನ ನೀವು ಏನು ಮಾಡಬೇಕು?"