ಚಾಲಕನ ವರ್ಗಾವಣೆಯ ವಿಚಾರವಾಗಿ ಬಂಟ್ವಾಳ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ನಡೆಸಿದ ಧರಣಿಗೆ ಪ್ರತಿಯಾಗಿ ಮಾಜಿ ಸಚಿವ ಬಿ. ರಮನಾಥ ರೈ ನೇತೃತ್ವದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಿಯೋಗ ಸೋಮವಾರ ಸಂಜೆ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿತು.
ಜನಪ್ರತಿನಿಗಳ ಒತ್ತಡಕ್ಕ ಸಿಲುಕದೆ ನ್ಯಾಯಪರವಾಗಿ ಕೆಲಸ ಮಾಡಿ, ಪ್ರತಿಭಟನೆಗೆ ಹೆದರಿ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಲ್ಲಿ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಸಣ್ಣ ವಿಚಾರವೊಂದನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಚಾಲಕನ ವರ್ಗಾವಣೆ ವಿಚಾರವಾಗಿ ಲೋಪವಾಗಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡಬೇಕಿತ್ತು. ಅದರ ಬದಲು ಪ್ರತಿಭಟನೆ ಮಾಡಲಾಗಿದೆ. ಅಧಿಕಾರಿಗಳನ್ನು ಹೆದರಿಸಲು ನಾವು ಅವಕಾಶ ಕೊಡುವುದಿಲ್ಲ. ನ್ಯಾಯಪರವಾಗಿ ಕೆಲಸ ಮಾಡಿ, ಪ್ರತಿಭಟನೆಗೆ ಹೆದರಿ ಕೆಲಸ ಮಾಡಬೇಡಿ ಎಂದು ಹೇಳಿದ್ದಾಗಿ ರೈ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್. ಪದ್ಮಶೇಖರ ಜೈನ್, ಮಮತಾಗಟ್ಟಿ, ಮಂಜುಳಾ ಮಾವೆ, ಬೇಬಿ ಕುಂದರ್, ಮಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ ಮತ್ತಿತರ ನಾಯಕರು ಹಾಜರಿದ್ದರು.
Be the first to comment on "ಚಾಲಕ ವರ್ಗಾವಣೆ ವಿಚಾರ – ನ್ಯಾಯಪರವಾಗಿ ಕೆಲಸ ನಿರ್ವಹಿಸಲು ರೈ ಮನವಿ"