ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು 2018-19ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸಂಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಕಟ್ಟೆಯಲ್ಲಿ ಸ್ಪರ್ಧೆಗಳು ನಡೆಯಿತು. ಹಿರಿಯರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ೫ನೇ ತರಗತಿಯ ವಾಸವಿ- ಕನ್ನಡ ಕಂಠಪಾಠ ಪ್ರಥಮ, ೭ನೇ ತರಗತಿಯ ಹೇಮಾಶ್ರೀ- ಸಂಸ್ಕೃತ ಕಂಠಪಾಠ ಪ್ರಥಮ, ೬ನೇ ತರಗತಿಯ ಚೇತನಾ-ಮರಾಠಿ ಕಂಠಪಾಠ ಪ್ರಥಮ, ೬ನೇ ತರಗತಿಯ ಅನನ್ಯ.ಕೆ – ಆಶು ಭಾಷಣ ಪ್ರಥಮ, ೬ನೇ ತರಗತಿಯಅಕ್ಷತಾಲಕ್ಷ್ಮೀಧಾರ್ಮಿಕ ಪಠಣ ಸಂಸ್ಕೃತ ದ್ವಿತೀಯ, ೬ನೇ ತರಗತಿಯ ಅನಘ.ಯು.ವಿ.ಭಟ್ ಭಕ್ತಿಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕಿರಿಯರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ೪ನೇತರಗತಿಯ ಗೌತಮಿ-ಮರಾಠಿ ಕಂಠಪಾಠ ಪ್ರಥಮ, ೪ನೇ ತರUತಿಯ ನಿನಾದ್- ತಮಿಳು ಕಂಠಪಾಠ ದ್ವಿತೀಯ, ೪ನೇ ತರಗತಿಯಅಲ್ವಿದಾ- ಧಾರ್ಮಿಕ ಸಂಸ್ಕೃತ ಪಠಣ ದ್ವಿತೀಯ ಸ್ಥಾನವನ್ನು ಪಡೆದರು. ಹಿರಿಯರ ಸಾಮೂಹಿಕ ವಿಭಾಗದ ಸ್ಪರ್ಧೆಗಳಾದ ಧೇಶಭಕ್ತಿಗೀತೆಯಲ್ಲಿ ಆದಿಶ್ರೀ,ವಾಸವಿ,ಹಂಸ,ಸಾನ್ವಿ,ಅನಘ,ಚಿನ್ಮಯಿ, ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ರಸಪ್ರಶ್ನೆಯಲ್ಲಿ ಶ್ರೀನಿವಾಸ,ಹರ್ಷಿತಾ,ಚರಿತ್,ಆದಿತ್ಯಕೃಷ್ಣ,ಅನನ್ಯ.ಕೆ,ಭೂಷಣ್, ಇವರು ಪ್ರಥಮ ಸ್ಥಾನ, ಜನಪದ ನೃತ್ಯದಲ್ಲಿ ವಾಸವಿ, ವರ್ಷಿಣಿ,ಕುಶಿ, ದೀಪ್ತಿ,ವಿನುತಾ,ನಿಶಾ.ಆರ್.ಎಸ್‌ಇವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಕಿರಿಯ ಸಾಮೂಹಿಕ ವಿಭಾಗದ ಸ್ಪರ್ಧೆಗಳಾದ ದೇಶಭಕ್ತಿಗೀತೆಯಲ್ಲಿ- ಶ್ರೀರಕ್ಷಾ,ತನ್ವಿ,ಕೃತಿಕಾ,ಮನಾಲಿ,ಸಮೃದ್ಧಿ ಮತ್ತು ಸಿಂಚನಾ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀರಕ್ಷಾ, ಕೃತಿಕಾ,ಅಂಕಿತಾ,ಸುಮೇಧಾ,ಪ್ರಣಾಮ್,ಪವನ್ ನಾಯಕ್, ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ, ಮತ್ತುಜನಪದ ನೃತ್ಯದಲ್ಲಿಕೀರ್ತಿ, ಗೌತಮಿ,ಸುಮೇದಾ,ಅಲ್ವಿದಾ,ಸಮೃದ್ಧಿ, ಹಾಗೂ ಕಾವ್ಯ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ೯-ಪ್ರಥಮ, ೫-ದ್ವಿತೀಯ, ೧-ತೃತೀಯ ಸ್ಥಾನವನ್ನು ಗಳಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.
Be the first to comment on "ಕಲ್ಲಡ್ಕ ಶ್ರೀರಾಮ ಹಿ.ಪ್ರಾ.ಶಾಲೆಗೆ ಸಮಗ್ರ ಪ್ರಶಸ್ತಿ"