ಬಂಟ್ವಾಳ ಪುರಸಭೆಗೆ ಸಲ್ಲಿಸಿದ ಒಟ್ಟು 101 ನಾಮಪತ್ರಗಳನ್ನು ಸೋಮವಾರ ಪರಿಶೀಲನೆ ಮಾಡಲಾಗಿದ್ದು, 101 ನಾಮಪತ್ರಗಳಲ್ಲಿ 84 ಸಕ್ರಮಗೊಂಡಿದೆ. 17 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿಯ 43, ಕಾಂಗ್ರೆಸ್ ನ 25, ಜೆಡಿಎಸ್ ನ 5, ಸಿಪಿಐನ 2, ಎಸ್.ಡಿ.ಪಿ.ಐ.ನ 22 ಮತ್ತು ಪಕ್ಷೇತರರು 4 ಮಂದಿ ಸೇರಿ ಒಟ್ಟು 99 ಮಂದಿಯಿಂದ 101 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ವಾರ್ಡ್ 10ರಲ್ಲಿ ವನಜಾಕ್ಷಿ ಮತ್ತು ವಾರ್ಡ್ 24ರಲ್ಲಿ ಮಹಮ್ಮದ್ ಅಮಾನುಲ್ಲಾ ತಲಾ 2 ನಾಮಪತ್ರ ಸಲ್ಲಿಸಿದ್ದರು. 10ರಿಂದ 18ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದ್ದರೂ 16ರಂದು ಮತ್ತು 18ರಂದು ನಾಮಪತ್ರಗಳು ಸಲ್ಲಿಕೆಯಾಗಿದ್ದವು
ಯಾರದ್ದೆಲ್ಲ ತಿರಸ್ಕೃತ:
ಬಿಜೆಪಿಯ 16 ಮತ್ತು ಸಿಪಿಐ 1 ನಾಮಪತ್ರಗಳು ತಿರಸ್ಕೃತವಾಗಿವೆ. ಬಿಜೆಪಿಯ ಎಲ್ಲರೂ ಬದಲಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರೆ, ಸಿಪಿಐ ಅಭ್ಯರ್ಥಿ ಸಲ್ಲಿಸಿದ ಎರಡು ನಾಮಪತ್ರಗಳಲ್ಲಿ ಒಂದು ತಿರಸ್ಕೃತಗೊಂಡಿವೆ.
ವಾರ್ಡ್ 1ರಲ್ಲಿ ದೀಕ್ಷಿತ್, 2ರಲ್ಲಿ ಯೋಗೀಶ್, 3ರಲ್ಲಿ ವಸಂತಿ, 4ರಲ್ಲಿ ವಾರಿಜ, 5ರಲ್ಲಿ ಸುರೇಶ್, 6ರಲ್ಲಿ ವಿಜಯ, 7ರಲ್ಲಿ ಸುಜಾತ ವಾರ್ಡ್ 9ರಲ್ಲಿ ವಿಶ್ವನಾಥ ಬಂಗೇರ, 10ರಲ್ಲಿ ವನಿತಾ, 11ರಲ್ಲಿ ಸುಮನಾ, 12ರಲ್ಲಿ ಸರೋಜಿನಿ, 13ರಲ್ಲಿ ಲತಾ, 14ರಲ್ಲಿ ಎನ್. ಗಾಯತ್ರಿ, ವಾರ್ಡ್ 20ರಲ್ಲಿ ಭೋಜ ಸಾಲಿಯಾನ್, 22ರಲ್ಲಿ ರಕ್ಷಿತಾ, 27ರಲ್ಲಿ ಸಂಧ್ಯಾ (ಎಲ್ಲರೂ ಬಿಜೆಪಿ), 10ರಲ್ಲಿ ವನಜಾಕ್ಷಿ (ಕಮ್ಯೂನಿಸ್ಟ್) ಸಲ್ಲಿಸಿದ ನಾಮಪತ್ರಗಳಲ್ಲಿ ಬಿ ಫಾರಂ ಸಲ್ಲಿಸಲಾಗಿಲ್ಲ ಹಾಗೂ ಒಬ್ಬನೇ ನಾಮನಿರ್ದೇಶನ ಮಾಡಿರುವ ಕಾರಣದಿಂದ 7 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.
Be the first to comment on "ಬಂಟ್ವಾಳ ಪುರಸಭೆ: 17 ನಾಮಪತ್ರ ತಿರಸ್ಕೃತ, 84 ಅಂಗೀಕಾರ"