www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ 78 ನಾಮಪತ್ರಗಳು ಸಲ್ಲಿಕೆಯಾಗಿವೆ.
ಶುಕ್ರವಾರ ಸರಕಾರಿ ಕಚೇರಿಗಳಿಗೆ ರಜೆ ಇದ್ದ ಕಾರಣ ಕಾರಣ ಹಾಗೂ ನಾಮಪತ್ರ ಸಲ್ಲಿಕೆ ಅವಧಿಯನ್ನು ಒಂದು ದಿನಕ್ಕೆ ವಿಸ್ತರಿಸಿದ ಕಾರಣ ಸೋಣ (ಶ್ರಾವಣ) ಸಂಕ್ರಾಂತಿಯ ದಿನವಾದರೂ ಬಂಟ್ವಾಳ ಪುರಸಭೆಗೆ ಯಾರಿಗೂ ನಾಮಪತ್ರ ಸಲ್ಲಿಕೆಗೆ ಅವಕಾಶ ಆಗಿರಲಿಲ್ಲ. ಶನಿವಾರ ಒಟ್ಟು 78 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಇವರಲ್ಲಿ ಬಿಜೆಪಿ -33, ಎಸ್.ಡಿ.ಪಿ.ಐ 21, ಕಾಂಗ್ರೆಸ್ – 19, ಪಕ್ಷೇತರ- 1, ಸಿಪಿಐ – 2, ಜೆಡಿಎಸ್ – 2 ಅಭ್ಯರ್ಥಿಗಳು ಸೇರಿದ್ದಾರೆ.
ಆಗಸ್ಟ್ 16ರಂದು 23 ಮಂದಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ 10, ಕಾಂಗ್ರೆಸ್ ನಿಂದ 6, ಜೆಡಿಎಸ್ 3, ಎಸ್.ಡಿ.ಪಿ.ಐ. ನಿಂದ 1 ಮತ್ತು ಪಕ್ಷೇತರ ಹಾಗೂ ಇತರರು 3 ಉಮೇದುವಾರಿಕೆಯನ್ನು ಸಲ್ಲಿಸಿದ್ದರು.
ಇದರಿಂದ ಒಟ್ಟು 101 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ಇವುಗಳ ಪೈಕಿ ಬಿಜೆಪಿಯಿಂದ 43, ಕಾಂಗ್ರೆಸ್ – 25, ಎಸ್.ಡಿ.ಪಿ.ಐ. 22, ಜೆಡಿಎಸ್ 5, ಸಿಪಿಐ 2, ಪಕ್ಷೇತರ ಮತ್ತು ಇತರರು 4 ಮಂದಿ ಸೇರಿದ್ದಾರೆ.
ಬಂಟ್ವಾಳ ಪುರಸಭೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಯಾದವು. ಚುನಾವಣಾಧಿಕಾರಿಗಳಾದ ರಾಜೇಶ್, ಮೋಹನ್ ಕುಮಾರ್, ನೋಣಯ್ಯ ನಾಯ್ಕ್, ಸಹಾಯಕ ಚುನಾವಣಾಧಿಕಾರಿಗಳಾದ ವೇದವ, ಶ್ರೀಧರ, ಶಿವಾನಂದ ಪೂಜಾರಿ ನಾಮಪತ್ರ ಸ್ವೀಕರಿಸಿದರು. ಅಭ್ಯರ್ಥಿಗಳು ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ಕಾರಣ ನೂಕುನುಗ್ಗಲು ಉಂಟಾಯಿತು.
ಶನಿವಾರ ನಾಮಪತ್ರ ಸಲ್ಲಿಸಿದವರ ವಿವರ ಹೀಗಿದೆ:
ವಾರ್ಡ್ – 1: ಬಿಜೆಪಿ -2, ಎಸ್.ಡಿ.ಪಿ.ಐ. 2, ಕಾಂಗ್ರೆಸ್ – 1. ಚಂದ್ರಶೇಖರ, ದೀಕ್ಷಿತ್ ಕುಮಾರ್ (ಬಿಜೆಪಿ), ರಿಯಾಜ್, ಆಸಿದ್ (ಎಸ್.ಡಿ.ಪಿ.ಐ), ಬಿ.ವಾಸು ಪೂಜಾರಿ (ಕಾಂಗ್ರೆಸ್)
ವಾರ್ಡ್ – 2: ಕಾಂಗ್ರೆಸ್ – 1, ಗಂಗಾಧರ (ಕಾಂಗ್ರೆಸ್)
ವಾರ್ಡ್ – 3: ಯಾರೂ ನಾಮಪತ್ರ ಸಲ್ಲಿಸಿಲ್ಲ.
ವಾರ್ಡ್ – 4: ಬಿಜೆಪಿ – 1, ಕಾಂಗ್ರೆಸ್ – 1. ವಾರಿಜಾ(ಬಿಜೆಪಿ), ಪ್ರತಿಮಾ (ಕಾಂಗ್ರೆಸ್)
ವಾರ್ಡ್ 5: ಬಿಜೆಪಿ – 2, ಕಾಂಗ್ರೆಸ್ – 1 ವಿಶ್ವನಾಥ , ಸುರೇಶ್ (ಬಿಜೆಪಿ), ಜನಾರ್ದನ (ಕಾಂಗ್ರೆಸ್)
ವಾರ್ಡ್: 6: ಕಾಂಗ್ರೆಸ್ – 1, ಬಿಜೆಪಿ – 1. ಜಯಂತಿ (ಕಾಂಗ್ರೆಸ್), ವಿಜಯಾ (ಬಿಜೆಪಿ)
ವಾರ್ಡ್ 7: ಕಾಂಗ್ರೆಸ್ – 1 ಕಾಂಗ್ರೆಸ್ – ಧನವಂತಿ
ವಾರ್ಡ್ : 8: ಬಿಜೆಪಿ – 1, ಎಸ್.ಡಿ.ಪಿ.ಐ. 1 ಬಿ.ಎಂ.ಇರ್ಷಾದ್ ಅಲಿ (ಎಸ್.ಡಿ.ಪಿ.ಐ.), ಉಮ್ಮರಬ್ಬ – ಬಿಜೆಪಿ
ವಾರ್ಡ್ 9 –ಕಾಂಗ್ರೆಸ್ – 1, ಬಿಜೆಪಿ 2, ಪಕ್ಷೇತರ 1. ಜಗದೀಶ ಕುಂದರ್ (ಕಾಂಗ್ರೆಸ್), ಹರಿಪ್ರಸಾದ್, ವಿಶ್ವನಾಥ ಬಂಗೇರ (ಬಿಜೆಪಿ), ಹರೀಶ್ ಬಿ (ಪಕ್ಷೇತರ)
ವಾರ್ಡ್ 10: ಸಿಪಿಐ -2, ಬಿಜೆಪಿ – 2 ವನಜಾಕ್ಷಿ (ಸಿಪಿಐ – 2 ನಾಮಪತ್ರ), ಶೋಭಾವತಿ, ವನಿತಾ (ಬಿಜೆಪಿ)
ವಾರ್ಡ್ 11: ಬಿಜೆಪಿ – 2, ಕಾಂಗ್ರೆಸ್ – 1. ಜಯಂತಿ, ಸುಮನಾ (ಬಿಜೆಪಿ), ಸುಜಾತಾ ಆರ್ (ಕಾಂಗ್ರೆಸ್)
ವಾರ್ಡ್ 12: ಬಿಜೆಪಿ – 2,. ವಿದ್ಯಾವತಿ, ಸರೋಜಿನಿ (ಬಿಜೆಪಿ)
ವಾರ್ಡ್ 13: ಬಿಜೆಪಿ – 2, ಎಸ್.ಡಿ.ಪಿ.ಐ. -2, ಕಾಂಗ್ರೆಸ್ – 1. ನೆಫಿಸಾ (ಕಾಂಗ್ರೆಸ್), ಕವಸರ್ ಬಾನು, ಲತಾ ಕೆ (ಬಿಜೆಪಿ), ಸಂಶದ್, ಅಮೀನಮ್ಮ (ಎಸ್.ಡಿ.ಪಿ.ಐ)
ವಾರ್ಡ್ 14: ಬಿಜೆಪಿ – 2, ಕಾಂಗ್ರೆಸ್ – 1, ಎಸ್.ಡಿ.ಪಿ.ಐ. – 2. ಕೆ.ಸುಗುಣ ಕಿಣಿ , ಎನ್. ಗಾಯತ್ರಿ (ಬಿಜೆಪಿ), ಶಹನಾಝ್ (ಕಾಂಗ್ರೆಸ್)., ಝೀನತ್ , ಮುಬೀನಾ (ಎಸ್.ಡಿ.ಪಿ.ಐ.)
ವಾರ್ಡ್ 15: ಕಾಂಗ್ರೆಸ್ – 1, ಬಿಜೆಪಿ – 1. ಎ.ಗೋವಿಂದ ಪ್ರಭು (ಬಿಜೆಪಿ), ಲೋಕೇಶ ಸುವರ್ಣ (ಕಾಂಗ್ರೆಸ್)
ವಾರ್ಡ್ 16: ಬಿಜೆಪಿ – 1, ಕಾಂಗ್ರೆಸ್ – 1, ಎಸ್.ಡಿ.ಪಿ.ಐ. – 1 ಸಲೀಂ (ಬಿಜೆಪಿ), ಮೊಹಮ್ಮದ್ (ಕಾಂಗ್ರೆಸ್), ಮಹಮ್ಮದ್ ಇಕ್ಬಾಲ್ (ಎಸ್.ಡಿ.ಪಿ.ಐ.)
ವಾರ್ಡ್ 17: ಬಿಜೆಪಿ-1, ಕಾಂಗ್ರೆಸ್ -1, ಎಸ್.ಡಿ.ಪಿ.ಐ.-2. ಅನಂತಕೃಷ್ಣ ನಾಯಕ್ (ಬಿಜೆಪಿ), ಲುಕ್ಮಾನ್ (ಕಾಂಗ್ರೆಸ್), ಮಹಮ್ಮದ್ ಇಕ್ಬಾಲ್, ಎಂ.ಅಬುಬಕ್ಕರ್ (ಎಸ್.ಡಿ.ಪಿ.ಐ.)
ವಾರ್ಡ್ 18: ಎಸ್.ಡಿ.ಪಿ.ಐ. 2, ಕಾಂಗ್ರೆಸ್ 1, ಬಿಜೆಪಿ 1. ಹಸೈನಾರ್ (ಕಾಂಗ್ರೆಸ್), ಬಶೀರ್, ಎಸ್.ಅಬುಬಕ್ಕರ್ (ಎಸ್.ಡಿ.ಪಿ.ಐ.). ಮಹೇಶ್ ಟಿ. (ಬಿಜೆಪಿ)
ವಾರ್ಡ್ 19: ಎಸ್.ಡಿ.ಪಿ.ಐ – 2, ಬಿಜೆಪಿ 1 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇಸಾಕ್ ಎಸ್. ಎ, ಬಿ.ಮಹಮ್ಮದ್ ಮುಸ್ತಾಕ್ (ಎಸ್.ಡಿ.ಪಿ.ಐ), ಶೇಕ್ ಶಾಹಿದ್ ಹುಸೈನ್ (ಬಿಜೆಪಿ).
ವಾರ್ಡ್ 20 – ಕಾಂಗ್ರೆಸ್ – 1, ಬಿಜೆಪಿ 2, ಎಸ್.ಡಿ.ಪಿ.ಐ.1 ಲೋಕಾಕ್ಷ (ಕಾಂಗ್ರೆಸ್), ಬೋಜ ಸಾಲಿಯಾನ್, ಸತೀಶ್ ಶೆಟ್ಟಿ (ಬಿಜೆಪಿ), ಲತೀಫ್ (ಎಸ್.ಡಿ.ಪಿ.ಐ.)
ವಾರ್ಡ್ 21- ಬಿಜೆಪಿ 1, ಎಸ್.ಡಿ.ಪಿ.ಐ. 1. ಪುಷ್ಪರಾಜ ಶೆಟ್ಟಿ (ಬಿಜೆಪಿ), ರಾಮಣ್ಣ ಶೆಟ್ಟಿ (ಎಸ್.ಡಿ.ಪಿ.ಐ.)
ವಾರ್ಡ್ 22: ಬಿಜೆಪಿ – 2, ಕಾಂಗ್ರೆಸ್ – 1. ಚೈತನ್ಯಾದಾಸ್, ರಕ್ಷಿತಾ (ಬಿಜೆಪಿ), ನಳಿನಾಕ್ಷಿ (ಕಾಂಗ್ರೆಸ್)
ವಾರ್ಡ್ 23: ಬಿಜೆಪಿ – 1, ಕಾಂಗ್ರೆಸ್ – 1, ಎಸ್.ಡಿ.ಪಿ.ಐ. – 2, ಜೆಡಿಎಸ್ – 1, ಸ್ವತಂತ್ರ ಪಕ್ಷ – 1. ಲಕ್ಷಣ್ ರಾಜ್ (ಬಿಜೆಪಿ), ಮೊಹಮ್ಮದ್ ನಿಸಾರ್ (ಕಾಂಗ್ರೆಸ್), ಮೊಹಮ್ಮದ್ ಇದ್ರಿಸ್, ಮೊಹಮ್ಮದ್ ಇಮ್ರಾನ್ (ಎಸ್.ಡಿ.ಪಿ.ಐ.), ಸಫೀಕ್ (ಜೆಡಿಎಸ್), ಮೊಹಮ್ಮದ್ ಇರ್ಫಾನ್ (ಸ್ವತಂತ್ರ)
ವಾರ್ಡ್ 24: ಬಿಜೆಪಿ – 1, ಎಸ್.ಡಿ.ಪಿ.ಐ. 2 ಜಿ.ಮಹಮ್ಮದ್ (ಬಿಜೆಪಿ), ಎಂ.ಯುಸುಫ್, ಇಸ್ಮಾಯಿಲ್ (ಎಸ್.ಡಿ.ಪಿ.ಐ.)
ವಾರ್ಡ್ 25: ಬಿಜೆಪಿ – 1, ಜೆಡಿಎಸ್ – 1. ಯಶೋಧ (ಬಿಜೆಪಿ) ಖೈರುನ್ನೀಸ (ಜೆಡಿಎಸ್)
ವಾರ್ಡ್ – 26: ಬಿಜೆಪಿ – 1, ಕಾಂಗ್ರೆಸ್ – 1 ಉಷಾಲತಾ (ಬಿಜೆಪಿ), ಗಾಯತ್ರಿ (ಕಾಂಗ್ರೆಸ್)
ವಾರ್ಡ್ 27: ಕಾಂಗ್ರೆಸ್ – 1. ಸುರೇಶ್ (ಕಾಂಗ್ರೆಸ್)
ಆಗಸ್ಟ್ 16ರಂದು ನಾಮಪತ್ರ ಸಲ್ಲಿಸಿದವರು:
ಆಗಸ್ಟ್ 16ರಂದು 23 ಮಂದಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ 10, ಕಾಂಗ್ರೆಸ್ ನಿಂದ 6, ಜೆಡಿಎಸ್ 3, ಎಸ್.ಡಿ.ಪಿ.ಐ. ನಿಂದ 1 ಮತ್ತು ಪಕ್ಷೇತರ ಹಾಗೂ ಇತರರು 3 ಉಮೇದುವಾರಿಕೆಯನ್ನು ಸಲ್ಲಿಸಿದ್ದರು. ಬಂಟ್ವಾಳ ಕಸ್ಬಾ ವಾರ್ಡ್ 2 ರಲ್ಲಿ ಬಿಜೆಪಿಯ 2 ನಾಮಪತ್ರ ಸಲ್ಲಿಕೆಯಾಗಿದೆ. ಪುರಸಭೆ ಮಾಜಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಮತ್ತು ಯೋಗಿಶ್ ಕುಲಾಲ್ ನಾಮಪತ್ರ ಸಲ್ಲಿಸಿದವರು. ವಾರ್ಡ್ 3 ಗೆ 1 ಕಾಂಗ್ರೆಸ್, 2 ಬಿಜೆಪಿಯಿಂದ ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್ ನಿಂದ ಹೇಮಾವತಿ, ಬಿಜೆಪಿಯಿಂದ ಮೀನಾಕ್ಷಿ ಮತ್ತು ವಸಂತಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 4ಕ್ಕೆ ಬಿಜೆಪಿಯಿಂದ ರೇಖಾ ಪೈ, ವಾರ್ಡ್ 6ಕ್ಕೆ ಬಿಜೆಪಿಯಿಂದ ದೇವಕಿ , ವಾರ್ಡ್ 7ಕ್ಕೆ ಬಿಜೆಪಿಯಿಂದ ಶಶಿಕಲಾ ಮತ್ತು ಸುಜಾತಾ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 8ಕ್ಕೆ ಕಾಂಗ್ರೆಸ್ ಪಕ್ಷದ ಮೊಹಮ್ಮದ್ ಸನೀರ್, ಎಸ್.ಡಿ.ಪಿ.ಐನ ಮೊನೀಶ್ ಆಲಿ ಅಹಮ್ಮದ್ , ಜೆಡಿಎಸ್ ನ ಹಾರೂನ್ ರಶೀದ್ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 12ಕ್ಕೆ ಜೆಡಿಎಸ್ ನಿಂದ ವಸಂತಿ, ವಾರ್ಡ್ 16ರಲ್ಲಿ ಎಸ್.ಡಿ.ಪಿ.ಐ.ನ ಸಾವುಲ್ ಹಮೀದ್ ನಾಂಪತ್ರ ಸಲ್ಲಿಸಿದ್ದಾರೆ. ವಾರ್ಡ್ 17ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ಖಾದರ್ ಇಕ್ಬಾಲ್ , ವಾರ್ಡ್ 19ರಲ್ಲಿ ಮಹಮ್ಮದ್ ಶರೀಫ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 21ರಲ್ಲಿ ಕಳೆದ ಸಾಲಿನ ಅಧ್ಯಕ್ಷ ಪಿ.ರಾಮಕೃಷ್ನ ಆಳ್ವ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 24ರಲ್ಲಿ ಮಹಮ್ಮದ್ ಅಮಾನುಲ್ಲಾ (ಸ್ವತಂತ್ರ), ಮಹಮ್ಮದ್ ಅಮಾನುಲ್ಲಾ (ಜೆಡಿಎಸ್), ಅಬುಬಕ್ಕರ್ ಸಿದ್ದೀಕ್ (ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 25ರಲ್ಲಿ ಜೆಸಿಂತಾ ಡಿಸೋಜ ಕಾಂಗ್ರೆಸ್ ಅಭ್ಯರ್ಥಿಯಾಗಿ , ವಾರ್ಡ್ 27ರಲ್ಲಿ ಸಂಧ್ಯಾ ಮತ್ತು ಜಯರಾಮ ಜಿ. ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.
Be the first to comment on "ಬಂಟ್ವಾಳ ಪುರಸಭೆಗೆ ಇಂದು 78 ಸೇರಿ ಒಟ್ಟು 101 ನಾಮಪತ್ರ ಸಲ್ಲಿಕೆ"