ಬುಧವಾರ ರಾತ್ರಿಯ ಬಳಿಕ ಮಳೆ ತೀವ್ರಗೊಳ್ಳುತ್ತಿದ್ದು, ಮಂಗಳೂರು – ಬೆಂಗಳೂರು ಮತ್ತು ಮಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಷೇದ ಮಾಡಲಾಗಿದೆ ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಸೂಚನಾ ಫಲಕವೊಂದನ್ನು ಬಿ.ಸಿ.ರೋಡ್ ಮುಖ್ಯ ವೃತ್ತ, ಮಾಣಿ ಜಂಕ್ಷನ್ ನಲ್ಲಿ ಟ್ರಾಫಿಕ್ ಪೊಲೀಸರು ಹಾಕಿದ್ದಾರೆ.
ಹಲವು ದಿನಗಳಿಂದ ನಿರಂತರವಾಗಿ ಸುರಿಯುವ ಗಾಳಿ ಮಳೆಗೆ ಈ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮಾಣಿಯ ಮೂಲಕ ಶಿರಾಡಿ ಮತ್ತು ಮೈಸೂರು ಸಂಪಾಜೆ ಘಾಟಿ ಸಂಚಾರ ಮಾಡಬೇಕಿದ್ದು, ವಾಹನ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.
ಶಿರಾಡಿ ಘಾಟ್ ರಸ್ತೆಯ ಮೂಲಕ ಮತ್ತು ಮಾಣಿಯಿಂದ ಮೈಸೂರು ಕಡೆ ವಾಹನ ಸಂಚಾರಕ್ಕೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳು ಚಾರ್ಮಾಡಿ ಘಾಟ್ ರಸ್ತೆಯಾಗಿ ಸಂಚಾರ ಮಾಡಬಹುದು ಎಂದು ಸೂಚನಾ ಫಲಕದಲ್ಲಿದೆ.
Be the first to comment on "ಎರಡೂ ಹೆದ್ದಾರಿ ನಿಷೇಧ: ಬಿ.ಸಿ.ರೋಡ್, ಮಾಣಿಯಲ್ಲಿ ಸೂಚನಾ ಫಲಕ"