www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ಪೇಟೆ ಸಹಿತ ನೇತ್ರಾವತಿ ಹರಿಯುವ ನದಿಯ ಪಕ್ಕದಲ್ಲೆಲ್ಲ ಗುರುವಾರ ಪ್ರವಾಹದ ಸ್ಥಿತಿ. ನದಿ ನೀರು ರಸ್ತೆ, ಮನೆಯಂಗಳಕ್ಕೆ ಬಂದರೆ ಹೋಗುವುದಾದರೂ ಎಲ್ಲಿಗೆ ಎಂಬ ಚಿಂತೆ ನದಿ ಪಕ್ಕದ ಜನರದ್ದು. ಬಂಟ್ವಾಳಲ್ಲಿ ಈ ಹಿಂದೆ ಧಾರಾಕಾರ ಮಳೆ ಬಂದು ಪ್ರವಾಹ ಬರುತ್ತಿತ್ತು. ಈಗ ಡ್ಯಾಂ ನಲ್ಲಿ ನೀರು ಬಿಡುವಂಥ ಪರಿಸ್ಥಿತಿ ಉದ್ಭವವಾದ ಕೂಡಲೇ ಪ್ರವಾಹ ಬರುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಏಕೆಂದರೆ ನೇತ್ರಾವತಿ ಹುಟ್ಟಿದಲ್ಲಿಂದ ಸಮುದ್ರ ಸೇರುವವರೆಗೆ ಡ್ಯಾಮುಗಳದ್ದೇ ತಡೆ. ನದಿಯೂ ಅದರಷ್ಟಕ್ಕೆ ಹರಿಯುವುದಿಲ್ಲ, ನದಿ ಹರಿಯುವ ಜಾಗಗಳ ಪಕ್ಕದಲ್ಲೆ ಅವಕಾಶ ಸಿಕ್ಕಲ್ಲೆಲ್ಲ ಜನರೂ ಖಾಲಿ ಜಾಗ ಬಿಡೋದಿಲ್ಲ. ಹೀಗೆ ನದಿ ನೀರು ಜಾಗ ಸಿಕ್ಕಲ್ಲೆಲ್ಲ ನುಗ್ಗಿಬಿಡುತ್ತದೆ. ಗುರುವಾರ ಬಂಟ್ವಾಳ, ಪಾಣೆಮಂಗಳೂರು ಪರಿಸರದ ಪರಿಸ್ಥಿತಿಯನ್ನು ಛಾಯಾಚಿತ್ರಗಳಲ್ಲೇ ನೋಡುವ ಬನ್ನಿ.
Photo Credit: Kishore Peraje and Deepak Salian
ನೇತ್ರಾವತಿ ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಷ್ಟೇ ಅಲ್ಲ, ಜಾನುವಾರುಗಳಿಗೂ ಸಮಸ್ಯೆ. ನದಿ ತೀರದ ಬಂಟ್ವಾಳ , ಪಾಣೆಮಂಗಳೂರು ಪೇಟೆ ಸಮೀಪ ಮನೆಯೊಂದರ ಕುಕ್ಕುಟಗಳೂ ಏನು ಮಾಡುವುದು ಎಂದು ದಾರಿ ತೋರದೆ ಕಂಗಾಲಾಗಿದ್ದವು. ಚಿತ್ರ: ಕಿಶೋರ್ ಪೆರಾಜೆ
ಬಂಟ್ವಾಳ ಪೇಟೆಯ ಹಲವು ಪ್ರದೇಶಗಳಲ್ಲಿ ನದಿ ನೀರು ರಸ್ತೆಗೆ ನುಗ್ಗಿದೆ. ರಸ್ತೆಯೊಂದರಲ್ಲಿ ಆಟೊ ಚಾಲಕರು ವಾಹನ ಚಲಾಯಿಸಲು ಪ್ರಯಾಸಪಟ್ಟರು. ಚಿತ್ರ: ದೀಪಕ್ ಸಾಲ್ಯಾನ್
ಬಂಟ್ವಾಳ ಕಂಚಿಕಾರಪೇಟೆಯಿಂದ ಬಂಟ್ವಾಳ ಕಡೆಗೆ ಹೋಗುವ ರಸ್ತೆ ನದಿ ನೀರು ಉಕ್ಕಿ ಹರಿದ ಕಾರಣ ಬ್ಲಾಕ್ ಆಗಿರುವುದು. ಚಿತ್ರ: ದೀಪಕ್ ಸಾಲ್ಯಾನ್
ಬಂಟ್ವಾಳ ಪೇಟೆ ಸಮೀಪ ಆಲಡ್ಕದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದ ಕಾರಣ ಸಹಾಯಕ್ಕಾಗಿ ಸಾರ್ವಜನಿಕರು ಅಗ್ನಿಶಾಮಕದಳದ ಮೊರೆ ಹೋದರು. ಚಿತ್ರ: ಕಿಶೋರ್ ಪೆರಾಜೆ
ಬಂಟ್ವಾಳದಲ್ಲಿ ಗುರುವಾರ ಸಂಜೆಯ ವೇಳೆಗೆ ಪೇಟೆ ಸನಿಹವೇ ನೇತ್ರಾವತಿ ನದಿ ಪ್ರವಾಹ ಆಗಮಿಸಿ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಚಿತ್ರ: ಕಿಶೋರ್ ಪೆರಾಜೆ
ನೇತ್ರಾವತಿ ಪ್ರವಾಹದಿಂದ ಬಂಟ್ವಾಳ ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರ ಅಜಿಲಮೊಗರುವಿನಲ್ಲಿ ಮಸೀದಿಯ ಬಳಿಯೇ ಪ್ರವಾಹ ಬಂದಿದೆ.
ಬಂಟ್ವಾಳ ಪೇಟೆಗೆ ಹೋಗುವ ರಸ್ತೆಯೇ ಹೀಗೆ..
Be the first to comment on "ನೀರು ರಸ್ತೆ, ಮನೆಯಂಗಳಕ್ಕೆ ಬಂದರೆ ಹೋಗುವುದಾದರೂ ಎಲ್ಲಿಗೆ?"