ಬ್ರಿಟಿಷರ ಕಾಲದಿಂದಲೂ ಸೇವಾ ಪ್ರಾಮುಖ್ಯತೆ ಹೊಂದಿರುವ ಗ್ರಾಮ ಸಹಾಯಕರು ಈಗಲೂ ಗೌರವಯುತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಹೇಳಿದರು.
ಭಾನುವಾರ ಬೆಳಿಗ್ಗೆ ಬಂಟ್ವಾಳ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಕಾರ್ಯಕಾರಿಣಿ ಸಭೆಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಸಹಾಯಕರ ಪ್ರತಿಭೆ, ಸಾಮರ್ಥ್ಯ ಹಾಗೂ ವಿದ್ಯಾರ್ಹತೆ ಗೆ ಅನುಗುಣವಾಗಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ತಿಳಿಸಿದರು.
ಗ್ರಾಮ ಸಹಾಯಕರ ಸೇವಾ ಭದ್ರತೆ, ಸೇವಾ ಖಾಯಮಾತಿ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಸಾಂಘಿತ ಪ್ರಯತ್ನ ನಡೆಸಿ, ರೂಪುರೇಷೆ ಹಾಕಲಾಗುವುದಾಗಿ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಮೂಡಬಿದ್ರೆ ಅವರು ತಿಳಿಸಿದರು. ಮಂಗಳೂರು ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಮಾರ್ಸೆಲ್ ಡಿಸೋಜ, ಸುಳ್ಯ ತಾಲೂಕು ಸಂಘದ ಅಧ್ಯಕ್ಷ ನಾರಾಯಣ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸತೀಶ್ ಹೆಗ್ಡೆ, ಬಂಟ್ವಾಳ ತಾಲೂಕು ಅಧ್ಯಕ್ಷ ಮೋಹನ್ ದಾಸ್ ಬಂಟ್ವಾಳ ಸಭೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಸಹಾಯಕರು ಈ ಸಭೆಯಲ್ಲಿ ಭಾಗವಹಿಸಿ, ಅನಿಸಿಕೆ ವ್ಯಕ್ತ ಪಡಿಸಿದರು.ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ವರದಿ ಮಂಡಿಸಿದರು. ಬಂಟ್ವಾಳ ತಾಲೂಕು ಸಂಘದ ಕಾರ್ಯದರ್ಶಿ ಸುಂದರ ಬಿ.ಕೆ. ಸ್ವಾಗತಿಸಿ, ಜಿಲ್ಲಾ ಸಂಘದ
ಗೌರವ ಅಧ್ಯಕ್ಷ ರಾಘವ ಗೌಡ ವಂದಿಸಿದರು.
Be the first to comment on "ಗ್ರಾಮ ಸಹಾಯಕರ ಜಿಲ್ಲಾ ಸಂಘದ ಸಭೆ"