ಹಿಂದುಗಳ ಸಂರಕ್ಷಣೆಗೆ ವಿಶ್ವ ಹಿಂದು ಪರಿಷತ್ ಕೊಡುಗೆ ಅಪಾರ ಎಂದು ಆರೆಸ್ಸೆಸ್ ವಿಭಾಗ ಸೇವಾ ಪ್ರಮುಖ್ ವೆಂಕಟ್ರಮಣ ಹೊಳ್ಳ ಹೇಳಿದರು.
ಬಿ.ಸಿ.ರೋಡಿನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ಬಂಟ್ವಾಳ ತಾಲೂಕು ಮಟ್ಟದ ಕಾರ್ಯಕರ್ತರ ಅಭ್ಯಾಸವರ್ಗ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿಂದು ಎನ್ನಲು ಭಯಪಡುವ ಕಾಲವೊಂದಿತ್ತು, ಈಗ ಹಾಗಿಲ್ಲ. ಈ ಬೆಳವಣಿಗೆಯ ಹಿಂದೆ ವಿಶ್ವ ಹಿಂದೂ ಪರಿಷತ್ ನ ಕೊಡುಗೆ ಅಪಾರವಾಗಿದೆ ಎಂದು ಹೊಳ್ಳ ಹೇಳಿದರು. ಸೇವೆ,ಸಂಸ್ಕಾರ,ಸುರಕ್ಷೆ ಎಂಬ ತ್ರಿಸೂತ್ರದಡಿ ತನ್ನನ್ನು ತೊಡಗಿಸಿಕೊಂಡು ರಾಷ್ಟ್ರಕಟ್ಟುವ ಕಾಯಕದಲ್ಲಿ ಸದ್ದಿಲ್ಲದೆ ಸುದ್ದಿಯಲ್ಲಿದ್ದು, ಮೇಲು,ಕೀಳು ಉಚ್ಚ,ನೀಚ ಎಂಬ ತಾರತಮ್ಯವಿಲ್ಲದೆ ಸಾಮರಸ್ಯದ ಬದುಕಿಗೆ ಮುನ್ನಡಿ ಬರೆಯುತ್ತಿದೆ ಎಂದರು.
ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನ ಮಾಲಕ ಸತೀಶ್ ರಾವ್ ಸಭಾಧ್ಯಕ್ಷತೆ ವಹಿಸಿದ್ದರು. ಬಳಿಕ ನಡೆದ ಅಭ್ಯಾಸವರ್ಗದಲ್ಲಿ ವಿಶ್ವಹಿಂದೂ.ಪರಿಷತ್ ನ ಪ್ರಾಂತ ಕಾರ್ಯ ವಾಹ ಶರಣ್ ಪಂಪ್ ವೆಲ್ ಅವರು ‘ಸಮಾಜದಲ್ಲಿ ಭಜರಂಗದಳದ ಪಾತ್ರ’ ,ಆರ್ ಎಸ್ ಎಸ್ ನ ಸಾಮರಸ್ಯ ಪ್ರಮುಖ್ ಸುರೇಶ್ ಪರ್ಕಳ ಅವರು ಸಂಘಟನೆ ಹಾಗೂ ಕಾರ್ಯಕರ್ತ , ಬಿ.ಸಿ.ರೋಡಿನ ವಕೀಲ ಪ್ರಸಾದ್ ರೈ ಅವರು ಕಾನೂನು ಮತ್ತು ಹೋರಾಟ, ಭಜರಂಗದಳದ ಕರ್ನಾಟಕ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಅವರು ಸಮಾಜದಲ್ಲಿ ಸಾಮರಸ್ಯಕ್ಕೆ ಕಾರ್ಯಕರ್ತನ ಕೊಡುಗೆ ಎಂಬ ವಿಚಾರ ಮಂಡಿಸಿದರು.
ಸುರೇಶ್ ಬೆಂಜನಪದವು, ಗುರುರಾಜ್ ಬಂಟ್ವಾಳ, ಅಕೇಶ್ ಬೆಂಜನಪದವು ಉಪಸ್ಥಿತರಿದ್ದರು. ಇದೇ ವೇಳೆ ಆರ್ ಎಸ್ ಎಸ್ ನ ಹಿರಿಯ ಕಾರ್ಯಕರ್ತ ವೆಂಕಟ್ರಮಣ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ವಿ.ಹಿಂ,ಪ.ದ ಜಿಲ್ಲಾ ಪ್ರಮುಖ್ ಸರಪಾಡಿ ಆಶೋಕ ಶೆಟ್ಟಿ ಪ್ರಸ್ತಾಪಿಸಿ, ಸ್ವಾಗತಿಸಿದರು.
Be the first to comment on "ಹಿಂದುಗಳ ಸಂರಕ್ಷಣೆಗೆ ವಿಶ್ವ ಹಿಂದು ಪರಿಷತ್ ಕೊಡುಗೆ ಅಪಾರ: ಹೊಳ್ಳ"