ಭಾರತೀಯ ಜೈನ್ ಮಿಲನ್ ನ ವಲಯ ೮ರ ವತಿಯಿಂದ ಬಂಟ್ವಾಳ, ಮಂಗಳೂರು, ಪುತ್ತೂರು ತಾಲೂಕು ಮಿಲನ್ ಗಳ ವತಿಯಿಂದ ಗಿಡ ನೆಡುವ ಯೋಜನೆಗೆ ಧರ್‍ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.
ಡಾ ಹೆಗ್ಗಡೆಯವರ ಪಟ್ಟಾಭಿಷೇಕದ ೫೦ನೇ ವರ್ಷದ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ ೮ ರ ವತಿಯಿಂದ ೫೦ ಸಾವಿರ ಗಿಡಗಳನ್ನು ನೆಡುವ ಹಾಗೂ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು ಅದರಂತೆ ಮಂಗಳೂರು,ಬಂಟ್ವಾಳ, ಪುತ್ತೂರು ತಾಲೂಕು ಮಿಲನ್‌ಗಳ ವತಿಯಿಂದ ಸುಮಾರು ೫ ಸಾವಿರ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಭಾಗದ ಜೈನ್ ಮಿಲನ್ ನಿರ್ದೇಶಕರಾದ ಸುದರ್ಶನ್ ಜೈನ್ ಅವರಿಗೆ ಹೆಗ್ಗಡೆಯವರು ಗಿಡ ವಿತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಹೇಮಾವತಿ ಹೆಗ್ಗಡೆ,, ಮಿಲನ್ ಪದಾಧಿಕಾರಿಗಳಾದ ಡಾ. ಯಶೋವರ್ಮ ಜೈನ್ ಉಜಿರೆ, ಪುಷ್ಪರಾಜ ಜೈನ್ ಮಂಗಳೂರು, ಸುಭಾಶ್‌ಚಂದ್ರ ಜೈನ್ ಬಂಟ್ವಾಳ, ಜೀವಂಧರ ಜೈನ್ ಬೆಳ್ತಂಗಡಿ, ಸೋಮಶೇಖರ ಶೆಟ್ಟಿ ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು.
Be the first to comment on "ಜೈನ್ ಮಿಲನ್‌ನ ಗಿಡ ನೆಡುವ ಯೋಜನೆಗೆ ಡಾ. ಹೆಗ್ಗಡೆ ಚಾಲನೆ"