ಭ್ರಾಮರೀ ಯಕ್ಷಮಿತ್ರರು ಮಂಗಳೂರು ಇದರ ಆಶ್ರಯದಲ್ಲಿ ಸೆಪ್ಟಂಬರ್ ಒಂದರಂದು ಮಂಗಳೂರಿನ ಪುರಭವನದಲ್ಲಿ ಜರಗಲಿರುವ ಮೂರನೇ ವರ್ಷದ ಯಕ್ಷವೈಭವ ಹಾಗೂ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನದ ಆಮಂತ್ರಣ ಪತ್ರಿಕೆ ಬಿಡುಗಡೆ ಜುಲೈ 30 ರಂದು ಮಂಗಳೂರಿನ ಹೋಟೆಲ್ ವುಡ್ ಲ್ಯಾಂಡ್ಸ್ ನಲ್ಲಿ ಜರಗಿತು.
ಹಾಪ್ ಕಾಮ್ಸ್ ಮಂಗಳೂರಿನ ಪ್ರಧಾನ ವ್ಯವಸ್ಥಾಪಕ ,ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟಿ ರವಿ ಶೆಟ್ಟಿ ಅಶೋಕನಗರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂಧರ್ಬದಲ್ಲಿ ಬಳಗ ಅಧ್ಯಕ್ಷ ವಿನಯಕೃಷ್ಣ ಕುರ್ನಾಡು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸೆಪ್ಟಂಬರ್ ಒಂದರಂದು ಸಂಜೆ 7.30 ಕ್ಕೆ ಜರಗುವ ಈ ಕಾರ್ಯಕ್ರಮದಲ್ಲಿ ಹಿಮ್ಮೇಳ ಕಲಾವಿದ ಮಿಜಾರು ಮೋಹನ ಶೆಟ್ಟಿಗಾರ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ,ಪಟ್ಲ ಸತೀಶ್ ಶೆಟ್ಟಿಯವರಿಗೆ ಗೌರವ ಸನ್ಮಾನ, ಯಕ್ಷಗಾನದ ನೇಪಥ್ಯ ಕಲಾವಿದರಾದ.ಬಿ.ಐತಪ್ಪ ಟೈಲರ್,ರಘು ಶೆಟ್ಟಿ ನಾಳ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಸತ್ಯ ಹರಿಶ್ಚಂದ್ರ,ಶೂರ್ಪನಖಾ ವಿವಾಹ,ಮಕರಾಕ್ಷ ಕಾಳಗ ಎಂಬ ಯಕ್ಷಗಾನ ಪ್ರಸಂಗಗಳು ಉಚಿತವಾಗಿ ಪ್ರದರ್ಶನಗೊಳ್ಳಲಿವೆ.
ಯಕ್ಷಗಾನದ ಲಿಸ್ಟ್ ಹೀಗಿದೆ.
ರಾತ್ರಿ 8ರಿಂದ 2.30 ರವರೆಗೆ
ಸತ್ಯ ಹರಿಶ್ಚಂದ್ರ
ಭಾಗವತರು
- ಪಟ್ಲ ಸತೀಶ್ ಶೆಟ್ಟಿ
- ಪ್ರಪುಲ್ಲ ಚಂದ್ರ ನೆಲ್ಯಾಡಿ.
- ಚೆಂಡೆ ಮದ್ದಳೆ ಪದ್ಮನಾಭ ಉಪಾದ್ಯ
- ಮುರಾರಿ ಕಡಂಬಳಿತ್ತಾಯ
- ಗುರುಪ್ರಸಾದ್ ಬೊಳಿಂಜಡ್ಕ
- ಚಕ್ರತಾಳ ರಾಜೇಂದ್ರಕೃಷ್ಣ
ಮುಮ್ಮೇಳ
- ಹರಿಶ್ಚಂದ್ರ- ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
- ಸಖ – ದಿನೇಶ್ ಕೋಡಪದವು
- ವಿಶ್ವಾಮಿತ್ರ- ರಾಧಾಕೃಷ್ಣ ನಾವಡ ಮಧೂರು
- ಮಾತಂಗ ಕನ್ಯೆಯರು – ಅಕ್ಷಯ್ ಮಾರ್ನಾಡ್,ರಕ್ಷಿತ್ ಪಡ್ರೆ
- ಚಂದ್ರಮತಿ – ಶಶಿಕಾಂತ್ ಶೆಟ್ಟಿ ಕಾರ್ಕಳ
- ಲೋಹಿತಾಶ್ವ – ಲೋಕೇಶ್ ಮುಚ್ಚೂರು
- ನಕ್ಷತ್ರಿಕ – ಸೀತಾರಾಮ್ ಕುಮಾರ್ ಕಟೀಲ್
- ಕೌಕ ಭಟ್ಟ- ಅರುಣ್ ಜಾರ್ಕಳ
- ಹೆಂಡತಿ – ರಾಜೇಶ್ ನಿಟ್ಟೆ
- ವೀರಬಾಹು – ಉಮೇಶ್ ಶೆಟ್ಟಿ ಉಬರಡ್ಕ
- ವಟುಗಳು – ಚಂದ್ರಕಾಂತ ,ಅಕ್ಷಯ,ಮಧು
- ಈಶ್ವರ – ವಾದಿರಾಜ ಕಲ್ಲೂರಾಯ
2.30 ರಿಂದ 4.30
ಶೂರ್ಪನಖಾ ವಿವಾಹ
ಹಿಮ್ಮೇಳ
- ಭಾಗವತರು – ರಾಮಕೃಷ್ಣ ಮಯ್ಯ ಸಿರಿಬಾಗಿಲು
- ಚೆಂಡೆ ಮದ್ದಳೆ – ಅಡೂರು ಗಣೇಶ್ ರಾವ್
- ಗಣೇಶ್ ಭಟ್ ನೆಕ್ಕರಮೂಲೆ
ಮುಮ್ಮೇಳ
- ರಾವಣ- ಹರಿನಾರಾಯಣ ಭಟ್ ಎಡನೀರು
- ಶೂರ್ಪನಖಿ -ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
- ಮಾಯಾ ಶೂರ್ಪನಖಿ -ಸುಖೇಶ್ ಮಡಾಮಕ್ಕಿ
- ಪ್ರಹಸ್ತ- ಉಜಿರೆ ನಾರಾಯಣ
- ವಿದ್ಯುಜ್ಜಿಹ್ವ- ಪ್ರಜ್ವಲ್ ಕುಮಾರ್ ಗುರುವಾಯನಕೆರೆ
- ದಿಬ್ಬಣಿಗರು – ಚಂದ್ರಕಾಂತ,ಅಕ್ಷಯ, ಮಧು
4.30 ರಿಂದ 6.30
ಮಕರಾಕ್ಷ ಕಾಳಗ
ಹಿಮ್ಮೇಳ
- ದ್ವಂದ್ವ ಭಾಗವತಿಕೆ – ಭಾಗವತರು
- ಬಲಿಪ ಪ್ರಸಾದ್ ಭಟ್ ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್
- ಚೆಂಡೆ ( ದ್ವಂದ್ವ)
- ಲಕ್ಮೀನಾರಾಯಣ ಅಡೂರು ಮತ್ತು ಚೈತನ್ಯಕೃಷ್ಣ ಪದ್ಯಾಣ
- ಮದ್ದಳೆ – ಗಣೇಶ್ ಭಟ್ ನೆಕ್ಕರಮೂಲೆ
ಮುಮ್ಮೇಳ
- ಶ್ರೀರಾಮ – ದಿನೇಶ್ ಶೆಟ್ಟಿ ಕಾವಳಕಟ್ಟೆ
- ಸುಗ್ರೀವ – ರಾಹುಲ್ ಶೆಟ್ಟಿ ಕುಡ್ಲ
- ಹನೂಮಂತ – ವೆಂಕಟೇಶ್ ಕಲ್ಲುಗುಂಡಿ
- ಲಕ್ಷ್ಮಣ – ರಾಜೇಶ್ ಪುತ್ತಿಗೆ
- ವಿಭೀಷಣ – ಕಿಶೋರ್ ಕೊಮ್ಮೆ
- ಅಂಗದ – ಲೋಕೇಶ್ ಮುಚ್ಚೂರು
- ರಾವಣ – ಬಾಲಕೃಷ್ಣ ಮಿಜಾರ್
- ದೂತ -ದಿನೇಶ್ ಕೋಡಪದವು
- ಕುಂಭ – ದಿವಾಕರ ರೈ ಸಂಪಾಜೆ
- ನಿಕುಂಭ – ಶಶಿಧರ ಕುಲಾಲ್ ಕನ್ಯಾನ
- ಪವಿಜ್ವಾಲೆ- ಅಂಬಾಪ್ರಸಾದ್ ಪಾತಾಳ
- ಮಕರಾಕ್ಷ – ಸುಬ್ರಾಯ ಹೊಳ್ಳ
- ಕಾಸರಗೋಡು
- ಸಂತೋಷ್ ಮಾನ್ಯ
- ಜಾಂಬವ – ಉಜಿರೆ ನಾರಾಯಣ.
- ಸಂಯೋಜನೆ – ಮಾಧವ ಕೊಳತ್ತಮಜಲು
Be the first to comment on "ಸೆ.1ರಂದು ಮಂಗಳೂರಲ್ಲಿ ಭ್ರಾಮರೀ ಯಕ್ಷಮಿತ್ರರಿಂದ ಯಕ್ಷವೈಭವ, ಪ್ರಶಸ್ತಿ ಪ್ರದಾನ, ಇಡೀ ರಾತ್ರಿ ಯಕ್ಷಗಾನ"