ಬಂಟ್ವಾಳ ತಾಲೂಕಿನ 58 ಗ್ರಾಮ ಪಂಚಾಯತ್ ಗಳಿಗೆ ಆಗಸ್ಟ್ 1ರಿಂದ ಸ್ವಚ್ಛತಾ ರಥ ಸಂಚರಿಸಲಿದೆ.
ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಿಂದ ಬೆಳಗ್ಗೆ 10.30ಕ್ಕೆ ರಥಯಾತ್ರೆ ಆರಂಭಗೊಳ್ಳಲಿದ್ದು, ಸ್ವಚ್ಛತೆಯ ಅರಿವು ಮೂಡಿಸಲು ಈ ಕ್ರಮ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ ( ಗ್ರಾ) ಯೋಜನೆಯಡಿ ಗ್ರಾಮ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿರುವ ಸಾರ್ವಜನಿಕ ಶೌಚಾಲಯ, ಸರ್ಕಾರಿ ಶಾಲೆಗಳು , ಅಂಗನವಾಡಿಗಳು , ಸಂತೆ ನಡೆಯುವ ಸ್ಥಳ, ಪ್ರಾಥಮಿಕ ಆರೋಗ್ಯ ಕೇಂದ್ರ , ಕುಡಿಯುವ ನೀರಿನ ಸ್ಥಳಗಳು ,ಪಂಚಾಯತ್ ಕಛೇರಿ , ಧಾರ್ಮಿಕ ಸ್ಥಳಗಳು, ಮುಖ್ಯ ಬೀದಿಗಳು ಇತ್ಯಾದಿ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡುವ ಮೂಲಕ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ -2018 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಪ್ರಯುಕ್ತ ರಥವು ಬಂಟ್ವಾಳ ತಾಲೂಕು ಪಂಚಾಯತ್ ಕಛೇರಿಯಿಂದ ಪ್ರಾರಂಭಿಸಿ ಬಂಟ್ವಾಳ ತಾಲೂಕಿನ 58 ಗ್ರಾಮ ಪಂಚಾಯತ್ ಗಳಿಗೆ ಈ ರಥ ಸಂಚರಿಸಿ ಸ್ವಚ್ಛತೆಗೆ ಗ್ರಾಮದ ಜನತೆಗೆ ಅರಿವು ಮೂಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
Be the first to comment on "ಆಗಸ್ಟ್ 1ರಿಂದ ಸ್ವಚ್ಛ ಸರ್ವೇಕ್ಷಣಾ ರಥ ಸಂಚಾರ"