ಕುವೈಟಿನ ಆರ್ದಿಯಾ ಎಂಬಲ್ಲಿ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸವನ್ನು ಕಳೆದ ಏಳು ತಿಂಗಳಿಮದ ಮಾಡುತ್ತಾ, ವೀಸಾ ಕಾಲಾವಧಿ ಮುಗಿದ ಕಾರಣ ತಾಯ್ನಾಡಿಗೆ ಮರಳಲಾರದೆ ಹಮೀದ್ ಇಸ್ಲಾಂ ಎಂಬವರ ಸಂಕಷ್ಟವನ್ನು ಬಶೀರ್ ಸಾಲೆತ್ತೂರು ಅವರು ನೀಡಿದ ಮಾಹಿತಿ ಮೇರೆಗೆ ಕೆ.ಸಿ.ಎಫ್. ಪರ್ವಾನಿಯಾ ಸೆಕ್ಟರ್ ಕಾರ್ಯದರ್ಶಿ ಮಜಮ್ಮಹ್ ಬಾಯಾರ್, ಕುವೈಟ್ ಕಮಿಟಿ ಟ್ರಸ್ಟ್ ನ ಹೈದರಲಿ ಕಲ್ಲರ್ಪೆ ಭೇಟಿಯಾಗಿ ಸಾಂತ್ವನ ಹೇಳಿದರು.
ಹಮೀದ್ ಇಸ್ಲಾಂ ಅವರ ವಿಸಾ ಕಾಲಾವಾಧಿ ಮುಗಿದಿರುವ ಕಾರಣ ಜುಲೈ ತಿಂಗಳಲ್ಲಿ ಮಗಳ ಮದುವೆಗೂ ಹೋಗಲು ಸಾಧ್ಯವಾಗದೆ ಇತರರಲ್ಲಿ ಕಷ್ಟವನ್ನು ಹೇಳಲಾಗದೆ ಪರಿತಪಿಸುತ್ತಿದ್ದರು. ಈ ವಿಷಯವು ಕುವೈಟ್ ಕೆ.ಸಿ.ಫ್ ಸದಸ್ಯರಿಗೆ ತಿಳಿದಾಗ ಇಸ್ಲಾಂ ಅವರನ್ನು ಸಂಪರ್ಕಿಸಿ ಅವರ ಯಜಮಾನನಲ್ಲಿ ಮಾತುಕತೆ ನಡೆಸಿ ಹೊಸ ವಿಸಾ ಮತ್ತು ಅವರ ಬಾಕಿ ಇರುವ ವೇತನವನ್ನು ನೀಡಲು ಕೇಳಿಕೊಂಡಾಗ ಕೆ.ಸಿ.ಫ್ ಸದಸ್ಯರ ಮಾತಿಗೆ ಮಣಿದು ಎಲ್ಲಾ ವ್ಯವಸ್ಥೆಯನ್ನು ಮಾಡುವುದಾಗಿ ಒಪ್ಪಿಕೊಂಡರು. ಹಮೀದರವರಿಗೆ ಧೈರ್ಯ ತುಂಬುವ ಕಾರ್ಯವನ್ನು ಹೈದರ್ ಕಲ್ಲರ್ಪೆಯವರ ಮಾಡಿದರು. ಜೊತೆಯಲ್ಲಿ ಇಬ್ರಾಹಿಂ ಸಹದಿ ಗುಂಡ್ಯೂರು ಬಾಕ್ರಬೈಲ್ ಉಪಸ್ಥಿತರಿದ್ದರು.
✍ ಬಶೀರ್ ಅಗರಿ
Be the first to comment on "ಸಂಕಷ್ಟದಲ್ಲಿರುವ ಹಮೀದ್ ಗೆ ಸಾಂತ್ವನ"