ಸದ್ಯದಲ್ಲೇ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆಗೆ ಬಿಜೆಪಿ ತನ್ನ ತಯಾರಿ ಆರಂಭಿಸಿದೆ. ಪುರಸಭಾ ವ್ಯಾಪ್ತಿಯ ಪ್ರಮುಖರು, ಕಾರ್ಯಕರ್ತರ ಸಭೆಯೊಂದು ಇಲ್ಲಿನ ರಂಗೋಲಿ ಹೋಟೆಲ್ ನಲ್ಲಿ ನಡೆಯಿತು. ಪುರಸಭಾ ವ್ಯಾಪ್ತಿಯ ಶಕ್ತಿಕೇಂದ್ರದ ಪ್ರಮುಖರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಸೇರಿ ಚರ್ಚೆ ನಡೆಸಿದರು.
ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ ,ಮೋನಪ್ಪ ದೇವಸ್ಯ,ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು, ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಜಿಪಂ ಮಾಜಿ ಸದಸ್ಯ ಚನ್ನಪ್ಪ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ,ಎಸ್ಸಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಮೂರು ಗ್ರಾಮಗಳ ಅಧ್ಯಕ್ಷರುಗಳಾದ ಕೃಷ್ಣಪ್ಪ ಪೂಜಾರಿ, ಪ್ರಮೋದ್ ಅಜ್ಜಿಬೆಟ್ಡು, ಸುದರ್ಶನ್, ಶಕ್ತಿ ಕೇಂದ್ರದ ಅಧ್ಯಕ್ಷ ಗೋಪಾಲ ಸುವರ್ಣ ಹಾಗೂ ಪುರಸಭೆಯ ಬಿಜೆಪಿ ಸದಸ್ಯರಾದ ಭಾಸ್ಕರ್ ಟೈಲರ್, ಸುಗುಣ ಕಿಣಿ, ಸಂಧ್ಯಾ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ಪುರಸಭೆಗೆ ಸಂಬಂಧಿಸಿ ಬಿಜೆಪಿ ಪುರಸಭಾ ವ್ಯಾಪ್ತಿಯ ಪ್ರಮುಖರ, ಕಾರ್ಯಕರ್ತರ ಸಭೆ ಇದಾಗಿದೆ. ಸೆ.8 ರಂದು ಪುರಸಭೆಯ ಆಡಳಿತಾವಧಿ ಪೂರ್ಣಗೊಳ್ಳಲಿದ್ದು, ಯಾವುದೇ ಸಮಯದಲ್ಲಿ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇದೆ. ಕಾಂಗ್ರೆಸ್’ ಕೈ’ ಯಲ್ಲಿರುವ ಬಂಟ್ವಾಳ ಪುರಸಭೆಯಲ್ಲಿ ಶತಾಯ-ಗತಾಯವಾಗಿ ಕಮಲ ಅರಳಿಸಲು ಶಾಸಕ ಯು.ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಪ್ರಮುಖರು ತಂತ್ರಗಾರಿಕೆ ರೂಪಿಸಿದ್ದಾರೆ. 23 ಸದಸ್ಯ ಬಲವಿದ್ದ ಪುರಸಭೆ 4 ಸದಸ್ಯ ಬಲವನ್ನು ಹೆಚ್ಚಿಸಿಕೊಂಡು 27 ಕ್ಕೇರಿದ ಬಳಿಕ ಇದು ಮೊದಲ ಚುನಾವಣೆಯಾಗಿದೆ.
Be the first to comment on "ಪುರಸಭೆ ಚುನಾವಣೆ ತಯಾರಿ: ಬಿಜೆಪಿ ಶಕ್ತಿಕೇಂದ್ರ ಸಭೆ"