ಬಿಐಟಿ ಮತ್ತು ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಕರ್ನಾಟಕ ಸಹಯೋಗದೊಂದಿಗೆ ನಾಲ್ಕು ದಿನಗಳ ಉಚಿತ ಸಾಫ್ಟ್‌ವೇರ್ ಮಾಹಿತಿ ಕಾರ್ಯಾಗಾರ ಬ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕಾಲೇಜಿನ ಹಿರಿಯ ಮಾರ್ಗದರ್ಶಕ ಡಾ. ರಾಯಿಕರ್, ಪ್ರಾಶುಪಾಲ ಡಾ. ಆಂಟೋನಿ, ಡೀನ್ ಡಾ. ಮಹಾಬಲೇಶ್ವರ, ಡಾ. ಅಝೀಜ್ ಮುಸ್ತಫಾ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಉಪಸ್ಥಿತರಿದ್ದರು.
ಎಫ್‌ಎಸ್‌ಎಂಐಯ ಪ್ರ.ಕಾರ್ಯದರ್ಶಿ ಕಿರಣ್ ಚಂದ್, ಎಫ್‌ಎಸ್‌ಎಫ್‌ಟಿಎನ್‌ನ ಅಭಿನವ್, ಎಫ್‌ಎಸ್‌ಎಂಕೆಯ ಅರುಣ್ ಐಸಾಕ್, ರಮೇಶನ್ ಹಾಗೂ ರಿಜ್ಮಾ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದರು.
“ಜ್ಞಾನ ಸಂಗ್ರಹ ಪ್ರಮುಖ ಸಾಧನಗಳ ಉಪಯೋಗ”, “ಉಪಯುಕ್ತ ಜ್ಞಾನವನ್ನು ಮಾನವೀಯ ಉಪಯೋಗಕ್ಕಾಗಿ ಹೇಗೆ ಬಳಸುವುದು?” ಹಾಗೂ “ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಸಾಫ್ಟ್‌ವೇರ್ ಹೇಗೆ ಉಪಯೋಗವಾಗಲಿದೆ?” ಎಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.
Be the first to comment on "ಸಾಫ್ಟ್ ವೇರ್ ತಂತ್ರಜ್ಞಾನ ಉಚಿತ ಮಾಹಿತಿ"