ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣೆ, ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ವತಿಯಿಂದ ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ಮಾಸಾಚರಣೆ ನಡೆಯುತ್ತಿದ್ದು, ಇದರ ಅಂಗವಾಗಿ ವಾಹನ ತಪಾಸಣೆ, ಮಾಹಿತಿ ಫಲಕಗಳನ್ನು ಹಾಕುವ ಕಾರ್ಯ ನಡೆಯಿತು.
ಶಾಲಾ ಕಾಲೇಜುಗಳಲ್ಲಿ ಸಂಚಾರ ನಿಯಂತ್ರಣದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗಳು ನಡೆಸಿಕೊಟ್ಟರು. ಎಸ್.ಐ. ಯಲ್ಲಪ್ಪ ನೇತೃತ್ವದಲ್ಲಿ ಶನಿವಾರ ಬ್ಯಾನರ್ ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಅಳವಡಿಸಲಾಯಿತು.
ನಿಧಾನವಾಗಿ ಚಲಿಸಿ, ನಿಮ್ಮ ಕುಟುಂಬ ನಿಮ್ಮ ಬರುವಿಕೆಗೆ ಕಾಯುತ್ತಿದೆ, ಈಗಾಗಲೇ ಮುಂಜಾಗರೂಕತೆ ವಹಿಸಿ, ಅಪಘಾತ ನಿಮ್ಮನ್ನು ಬಲಿಪಡೆಯುವ ಮುನ್ನ, ಮಕ್ಕಳಿಗೆ ವಾಹನ ಕೊಡುವ ಮುನ್ನ ಯೋಚಿಸಿ ಇತ್ಯಾದಿ ಸೂಚನೆಗಳು ಇರುವ ಬ್ಯಾನರ್ ನಲ್ಲಿ ರಸ್ತೆ ಸುರಕ್ಷತೆಯ ಕುರಿತು ಸಂದೇಶಗಳನ್ನು ಬರೆಯಲಾಗಿದೆ.
Be the first to comment on "ಸಂಚಾರಿ ನಿಯಮ – ಬ್ಯಾನರ್ ಮೂಲಕ ಪೊಲೀಸರ ಜಾಗೃತಿ"