ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಮಟ್ಟದಲ್ಲಿ ಆಯೋಜಿಸಿದ ಆಧಾರ್ ಆದಾಲತ್ ಸಪ್ತಾಹ ಶನಿವಾರ ಕೊನೆಗೊಂಡಿದೆ. ಆದರೆ ಇದನ್ನು ವಿಸ್ತರಿಸಬೇಕು ಎಂದು ಎಸ್.ಡಿ.ಪಿ.ಐ. ಮನವಿ ಮಾಡಿದೆ.
16 ರಿಂದ ಆರಂಭಗೊಂಡು ಜುಲೈ 21 ರ ವರೆಗೆ ನಡೆದ ಈ ಅದಾಲತ್ ನಲ್ಲಿ ಹಲವು ಸಮಸ್ಯೆಗಳು ಪರಿಹಾರವಾಗಿವೆ. ಆದರೆ ಆಧಾರ್ ಸಂಬಂಧಿತ ಸಮಸ್ಯೆ ಹೊಂದಿರುವವರ ಸಂಖ್ಯೆಯು ಬಹಳಷ್ಟಿದ್ದು, ಅವರೆಲ್ಲರಿಗೂ ಆದಾಲತ್ ನಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಆ ನಿಟ್ಟಿನಲ್ಲಿ ಸಾರ್ವಜನಿಕರ ಪರವಾಗಿ ಸೋಶಿಯಲ್ ಡೇಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಮೊನೀಶ್ ಆಲಿ ನೇತೃತ್ವದ ನಿಯೋಗ ಬಂಟ್ವಾಳ ತಹಶೀಲ್ದಾರ್ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿತು.
ಅದಾಲತ್ ಅನ್ನು ಕನಿಷ್ಠ ಇನ್ನೂ ಒಂದು ವಾರಗಳ ಕಾಲ ನಡೆಸಿ ಇನ್ನಷ್ಟು ಮಂದಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಕೋರಿತು.
ಮನವಿಯನ್ನು ಸ್ವೀಕರಿಸಿದ ಬಂಟ್ವಾಳ ತಾಲೂಕು ತಹಶಿಲ್ದಾರರು, ಸದ್ರಿ ವಿಚಾರವನ್ನು ಮಾನ್ಯ ದ.ಕ ಜಿಲ್ಲಾ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಈ ನಿಟ್ಟಿನಲ್ಲಿ ಪ್ರಯತ್ನಿಸುವ ಭರವಸೆ ನೀಡಿದ್ದಾರೆ.
ನಿಯೋಗದಲ್ಲಿ ಪುರಸಭಾ ಸಮಿತಿ ಕಾರ್ಯದರ್ಶಿ ಸಿದ್ದೀಕ್ ನಂದರಬೆಟ್ಟು, ಜೊತೆ ಕಾರ್ಯದರ್ಶಿ ಅನ್ವರ್ ಆಲಡ್ಕ, ಸಮಿತಿ ಸದಸ್ಯ ಇಬ್ರಾಹಿಂ ಖಲೀಲ್, ಬ್ರಾಂಚ್ ಮಟ್ಟದ ನಾಯಕರುಗಳಾದ ರಿಜ್ವಾನ್ ಅಕ್ಕರಂಗಡಿ, ಇರ್ಷಾದ್ ಬಂಟ್ವಾಳ, ಇಕ್ಬಾಲ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಆಧಾರ್ ಆದಾಲತ್ ಅವಧಿ ವಿಸ್ತರಿಸುವಂತೆ ಎಸ್.ಡಿ.ಪಿ.ಐ ಮನವಿ"