for details – click www.bantwalnews.com
ವಿಶ್ವಕರ್ಮ ಸಹಕಾರಿ ಬ್ಯಾಂಕಿನ ಮೇಲ್ಕಾರ್ ಶಾಖೆಯ ಕಚೇರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅನಾಹುತ ಭಾನುವಾರ ಸಂಭವಿಸಿದೆ. ಕಂಪ್ಯೂಟರ್ ಗಳು ಮತ್ತು ಕೆಲ ಕಾಗದಪತ್ರಗಳು ಬ್ಯಾಂಕಿನ ಕೆಲ ಸೊತ್ತುಗಳು ಸುಟ್ಟು ಹೋಗಿವೆ. ಬೆಂಕಿ ಅವಘಡದ ಹಿನ್ನಲೆಯಲ್ಲಿ ಬ್ಯಾಂಕಿನ ಗ್ರಾಹಕರು ಯಾರು ಆತಂಕಪಡಬೇಕಾಗಿಲ್ಲ, ಸೋಮವಾರದಿಂದ (ಜು.16 ) ಎಂದಿನಂತೆ ಬ್ಯಾಂಕಿನಲ್ಲಿ ಗ್ರಾಹಕರಿಗೆ ಸೇವೆ ಲಭ್ಯವಿದೆ.ಗ್ರಾಹಕರಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳು ಸುಭದ್ರವಾಗಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ ಸ್ಪಷ್ಟಪಡಿಸಿದ್ದಾರೆ.
ರಜಾದಿನವಾದ ಕಾರಣ ಬ್ಯಾಂಕಿನಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭ ಬ್ಯಾಂಕಿನಲ್ಲಿ ಹೊಗೆ ಬರುತ್ತಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರು, ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾದರು.
ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದು ಹೇಳಲಾಗುತ್ತಿದೆ. ಕಂಪ್ಯೂಟರ್ ಸರ್ವರ್ ಶಾರ್ಟ್ ಆಗಿ ಬೆಂಕಿ ಹರಡಿದೆ. ಒಂದು ಕಂಪ್ಯೂಟರ್, ಸರ್ವರ್ ಇದರಿಂದ ಸುಟ್ಟುಹೋದವು. ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಬಂಟ್ವಾಳ ಅಪರಾಧ ವಿಭಾಗ ಎಸ್.ಐ. ಹರೀಶ್, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಘಟನೆ ಸಂದರ್ಭ ಮೇಲ್ಕಾರ್ ನಲ್ಲಿ ಸಂಚಾರದಟ್ಟಣೆಯೂ ಉಂಟಾಯಿತು.
Be the first to comment on "ಮೇಲ್ಕಾರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕಿನೊಳಗೆ ಬೆಂಕಿ"