ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯವು ತೃತೀಯ ವರ್ಷದ ಗಣಕಯಂತ್ರ, ಮಾಹಿತಿ ತಂತ್ರಜ್ಞಾನ ವಿಭಾಗ ಹಾಗೂ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳಿಗೆ ಮೂರು ವಾರದ ವೃತ್ತಿಪರ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಲೌ ಕ್ಲೌಡ್‌ಇ ಟೆಕ್ನೋಲಾಜಿಸ್ ವ್ಯವಸ್ಥಾಪಕ ನಿರ್ದೇಶಕ ಮಹೇಶ ಪಧ್ಯಾಣ, ಭಾಗವಹಿಸಿದ್ದರು. ರಾಧಾಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ|ಶ್ರೀನಿವಾಸ ಮಯ್ಯ ಡಿ. ವಹಿಸಿದರು. ಪ್ರೋ. ಶಿವಕುಮಾರ್ ಜಿ. ಎಸ್., ವಿಭಾಗ ಮುಖ್ಯಸ್ಥರು, ಗಣಕ ಯಂತ್ರ ವಿಭಾಗ ಮತ್ತು ಪ್ರೋ. ಸೂರ್ಯಕೃಷ್ಣ ಕೆ., ವಿಭಾಗ ಮುಖ್ಯಸ್ಥರು, ವಿದ್ಯುನ್ಮಾನ ಮತ್ತು ಸಂವಹನ ವಿಭಾಗ ಉಪಸ್ಥಿತರಿದ್ದರು.
ಪ್ರೋ. ಹರ್ಷವರ್ಧನ್‌ರವರ ಸ್ವಾಗತಿಸಿದರು. ಪ್ರೋ. ರಾಕೇಶ್ ಮಲ್ಯ ವಂದಿಸಿದರು. ವಿದ್ಯಾರ್ಥಿನಿ ಕು. ಶೃತಿ ಕಾರ್ಯಕ್ರಮವನ್ನು ನಿರೂಪಿಸಿದರು.
Be the first to comment on "ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವೃತ್ತಿಪರ ಶಿಕ್ಷಣ ತರಬೇತಿ"