ಪುರಾಣ ಪ್ರಸಿದ್ಧ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 2 ಕೋ. ರೂ ವೆಚ್ಚದಲ್ಲಿ ಪುನರ್ನಿರ್ಮಾಣಗೊಳ್ಳುತ್ತಿರುವ ಪ್ರಯುಕ್ತ ದೇವಸ್ಥಾನದ ಗರ್ಭಗುಡಿ, ಸುತ್ತು ಪೌಳಿ ಮೊದಲಾದ ಛಾವಣಿಯ ರಚನೆಗಾಗಿ ಮರದ ಉಪಯೋಗಕ್ಕೆ ಮರಕಡಿಯಲು ವಾಮದಪದವಿನಲ್ಲಿ ವೃಕ್ಷ ಮುಹೂರ್ತ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ ಅವರು ವೈದಿಕ ವಿಧಿ ವಿಧಾನಗಳನ್ನು ನಡೆಸಿ, ಸಾಮೂಹಿಕ ಪ್ರಾರ್ಥನೆ ನಡೆಸಿ, ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಮರದ ಉಪಯೋಗಕ್ಕಾಗಿ ಮರ ಕಡಿಯಬೇಕಾಗುವುದರಿಂದ ದೇವರನ್ನು ಪೂಜಿಸಿ ವೃಕ್ಷ ಮುಹೂರ್ತ ನಡೆಸುವುದರಿಂದ ದೇಗುಲ ನಿರ್ಮಾಣ ಕಾರ್ಯ ಯಶಸ್ವಿಯಾಗುವುದು ಎಂದು ಹೇಳಿದರು. ದೇವಳದ ಅರ್ಚಕ ಅನಂತ ಮಹಿಮ ಭಟ್ ಸಹಕಾರದಲ್ಲಿ ತೇಗದ ಮರಕ್ಕೆ ವೃಕ್ಷ ಮುಹೂರ್ತ ನಡೆಯಿತು. ಕಾರ್ಯಕ್ರಮಕ್ಕೆ ಮುನ್ನ ಪದವು ದೇವಸ್ಥಾನದಲ್ಲಿ ವೃಕ್ಷ ಮುಹೂರ್ತಕ್ಕಾಗಿ ವಿಶೇಷ ಪೂಜೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಘುನಾಥ ಟಿ. ಪೈ ಮಾವಿನಕಟ್ಟೆ, ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಕಾರ್ಯಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ವೃಕ್ಷ ದಾನಿಗಳಾದ ಸುನಂದಾ ಶೆಟ್ಟಿ, ರಮೇಶ್ ಶೆಟ್ಟಿ, ಕೃಷ್ಣ ಶೆಟ್ಟಿ ಗೋಂಜ, ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿಗಳ ಪದಾಽಕಾರಿಗಳು ಮತ್ತು ಸದಸ್ಯರು,ಮಾಗಣೆ ಗ್ರಾಮಸ್ಥರು ಉಪಸ್ಥಿತರಿದ್ದರು.
Be the first to comment on "ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿ, ಛಾವಣಿ ರಚನೆಗೆ ವೃಕ್ಷ ಮುಹೂರ್ತ"