ಜೋಡುಮಾರ್ಗ ಜೇಸಿಯ ತಂಡದಲ್ಲಿ ಪ್ರತಿಭಾವಂತರ ಸಂಗಮವಿದ್ದು, ಇದರಿಂದ ಮರುಸ್ಥಾಪನೆಗೊಂಡ ವರ್ಷವೇ ಪ್ರಶಸ್ತಿಗಳನ್ನು ಪಡೆಯುವಂತಾಗಿದೆ ಎಂದು ಜೇಸಿ ವಲಯ 15ರ ಅಧ್ಯಕ್ಷ ರಾಕೇಶ್ ಕುಂಜೂರು ಹೇಳಿದರು.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಜೇಸಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನತೆಯಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರನ್ನು ರೂಪಿಸುವ ಕಾರ್ಯ ಪ್ರಪಂಚದ ಎಲ್ಲ ಭಾಗಗಳಲ್ಲಿ ಯಶಸ್ವಿಯಾಗಿ ಜೇಸೀ ಸಂಸ್ಥೆ ಮಾಡುತ್ತಿದೆ. ವಿವಿಧ ಕ್ಷೇತ್ರದಲ್ಲಿ ನಾಯಕತ್ವ ವಹಿಸಿ ಯಶಸ್ವಿಯಾಗಿ ಅನೇಕ ಮಹನೀಯರು ಜೇಸೀ ಮೂಲಕ ಯಶಸ್ಸುಗಳಿಸಿಧ್ಧಾರೆ ಎಂದರು.
ನಾನಾ ಶಾಶ್ವತ ಯೋಜನೆಗಳಿಗೆ ಚಾಲನೆ ನೀಡಿದ ಅವರು, ಈ ಸಂದರ್ಭ ಪ್ರೌಢಶಾಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಬಂಟ್ವಾಳ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವನ್ನು ದಿ.ಗಿರಿಜಾ ರಾಮಚಂದ್ರ ಬಂಗೇರ ನಿರ್ಮಲ್ ಸ್ಮರಣಾರ್ಥ ವಿಧ್ಯಾರ್ಥಿವೇತನ , ಮುಂಡಾಜೆ ಗುತ್ತು ಮನೆಯವರು, ಡಾ.ರಾಘವೇಂದ್ರ ಹೊಳ್ಳ ಪ್ರಾಯೋಜಕರಾದ ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ವತಿಯಿಂದ ಪ್ರತಿ ವರ್ಷ ಕೊಡಮಾಡುವ ಧನಸಹಾಯವನ್ನು ವಲಯಾಧ್ಯಕ್ಷರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಇಬ್ಬರು ಹಾಗೂ ದೀಪಿಕಾ ಫ್ರೌಢಶಾಲೆಯ ವಿಧ್ಯಾರ್ಥಿಗಳಿಗೆ ವಿತರಿಸಿದರು. ವಿದ್ಯಾರ್ಥಿಗಳ ಮಾಹಿತಿಗಳನ್ನು ಪೂರ್ವಾಧ್ಯಕ್ಷ ಉಮೇಶ್ ನಿರ್ಮಲ್ ನಿರ್ವಹಿಸಿದರು. ಜೇಸಿ ಜೋಡುಮಾರ್ಗ ನೇತ್ರಾವತಿ ವತಿಯಿಂದ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರ್ ಅವರಿಗೆ ಸನ್ಮಾನ ಸಮಾರಂಭ ನೆರವೇರಿಸಲಾಯಿತು. ಅಧ್ಯಕ್ಷತೆ ಯನ್ನು ಜೇಸೀ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾದ ಸವಿತಾ ನಿರ್ಮಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ ಉಪಾಧ್ಯಕ್ಷರಾದ ಜೇಸೀ ಐ ಸೆನೆಟರ್ ಪಶುಪತಿ ಶರ್ಮ, ವಲಯಾಧ್ಯಕ್ಷರ ಆಪ್ತ ಸಹಾಯಕ ಶ್ರೀನಿವಾಸ್ ಐತಾಳ್ , ಕಾರ್ಯದರ್ಶಿ ಹರ್ಷರಾಜ್, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಯುವ ಜೇಸಿ ಅಧ್ಯಕ್ಷೆ ದಿವ್ಯಾ ಉಪಸ್ಥಿತರಿದ್ದರು. ಜಯಾನಂದ ಪೆರಾಜೆ ವಲಯಾಧ್ಯಕ್ಷರ ಪರಿಚಯ ಮಾಡಿದರು. ಕೃಷ್ಣರಾಜ್ ಭಟ್ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು ಕಾರ್ಯಕ್ರಮ ನಿರ್ದೇಶಕ ಶನ್ಪತ್ ಷರೀಪ್ ವಂದಿಸಿದರು.
Be the first to comment on "ಜೋಡುಮಾರ್ಗ ಜೇಸಿಯಲ್ಲಿ ಪ್ರತಿಭಾ ಸಂಗಮ: ರಾಕೇಶ್ ಕುಂಜೂರು"