Editor: Harish Mambady
ಎಲ್ಲದಕ್ಕೂ ಮಳೆಯನ್ನು ದೂರಿ ಪ್ರಯೋಜನವಿಲ್ಲ.
ಡೇಂಜರ್.
ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಹಲವು ರಸ್ತೆಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಇಲ್ಲ. ಓಡಾಟವೂ ಅಸಾಧ್ಯ. ಹೀಗೊಂದು ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಬೇಸಗೆಯಲ್ಲಿ ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಭಯಂಕರ ಭಾಷಣ ಮಾಡುತ್ತಿದ್ದವರು ಕಾಣಿಸುತ್ತಿಲ್ಲ. ಅಲ್ಲಿ ಕೊಡೆ ಹಿಡಿದು ನಡೆಯುವವರು ಮನುಷ್ಯರು, ಅವರಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಇದ್ದಾರೆ, ಇವರ ಪರ ಸಮಾನ ಮನಸ್ಕರೂ ಒಟ್ಟಾಗಿ ಫ್ಲೈಓವರ್ ಅಡಿ ಘೋಷಣೆ ಕೂಗಲು ನಿಲ್ಲುತ್ತಿಲ್ಲ. ಏಪ್ರಿಲ್, ಮೇ ತಿಂಗಳಲ್ಲಿ ದೇಶದ ವೈವಿಧ್ಯಮಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದವರು ಬಿ.ಸಿ.ರೋಡಿನ ವಿಚಾರಗಳ ಕುರಿತು ಮಾತನಾಡಲು ಹೊರಡೋದೇ ಇಲ್ಲ ಎಂಬಿತ್ಯಾದಿ ಬೇಸರ ಇಲ್ಲಿನ ಜನರಿಗಿದೆ. ಇಡೀ ಬಿ.ಸಿ.ರೋಡ್ ಪೇಟೆ ನೋಡಲು ಲಾಯಕ್ಕಿಲ್ಲ ಎಂಬಂತಾಗಿದೆ.
ಇದು ಪೇಟೆ ಮಾತಾದರೆ, ಹಳ್ಳಿಗಳ ಸ್ಥಿತಿ ಭಿನ್ನವೇನಲ್ಲ.
ರಸ್ತೆಯಂಚಿನ ಮಣ್ಣು ಜಾರುತ್ತಲೇ ಇದೆ. ಅಪೂರ್ಣ ಕಾಮಗಾರಿ ಕಾರಣವೋ ಗೊತ್ತಿಲ್ಲ. ಆದರೆ ಮನೆಯಿಂದ ಹೊರಗೆ ನಡೆದುಕೊಂಡು ಹೋದರೂ ಸುರಕ್ಷಿತವಾಗಿ ಮರಳಿ ಬಂದರೆ ಅದೇ ವಿಷೇಷ ಎಂಬ ವಾತಾವರಣ. ಶಾಲೆ ಮಕ್ಕಳು, ನಿತ್ಯಸಂಪಾದನೆಗೆ ತೆರಳುವವರು ಪ್ರಯಾಸಪಡುತ್ತಿದ್ದಾರೆ. ನಮ್ಮಿಂದ ಆಯ್ಕೆಯಾದವರು ನಮ್ಮ ಪರವಾಗಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ, ವಿಧಾನಸಭೆ, ಲೋಕಸಭೆಗಳಲ್ಲಿ ಪ್ರತಿನಿಧಿಸುವವರು, ನಮ್ಮದೇ ತೆರಿಗೆಯ ಹಣವನ್ನು ಅನುದಾನ ಎಂದು ವಿಂಗಡಿಸಿ ಕೊಡುವವರು ಇತ್ತ ಗಮನ ಹರಿಸಿದರೆ ಸಮಸ್ಯೆಗೆ ಸಣ್ಣ ಪರಿಹಾರ ದೊರಕಬಹುದು.
ಎಲ್ಲದಕ್ಕೂ ಮಳೆಯನ್ನು ದೂರಿ ಪ್ರಯೋಜನವಿಲ್ಲ.
Be the first to comment on "ಸುರಕ್ಷಿತ ಸಂಚಾರಕ್ಕೆ ಇಲ್ಲಿ ನಿಷೇಧ ?"