ಚೈಲ್ಡ್ ಲೈನ್ –1098 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು “ತೆರೆದ ಮನೆ” ಎಂಬ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನಂದಾವರ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಚೈಲ್ಡ್‌ಲೈನ್‌ನ ಭಿತ್ತಿ ಪತ್ರವನ್ನು ಪ್ರದರ್ಶಿಸಿ ಉದ್ಘಾಟಿಸಲಾಯಿತು.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಪಿಎಸೈ ಸೌಮ್ಯ.ಜೆ. ಮಾತನಾಡಿ, ಈ ಕಾರ್ಯಕ್ರಮದಲ್ಲಿ ‘ತಲೆ ಬಗ್ಗಿಸಿ ನನ್ನನ್ನು ಓದು, ತಲೆ ಎತ್ತಿ ನಡೆಯುವಂತೆ ಮಾಡುತ್ತೇನೆ’ ಎಂದು ಗ್ರಂಥ ಹೇಳುತ್ತದೆ, ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಬಿಟ್ಟು, ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಇದರಿಂದ ಮಕ್ಕಳ ಭೌದ್ಧಿಕ ಮಟ್ಟ ಹೆಚ್ಚುವುದಲ್ಲದೇ, ಜ್ಞಾನರ್ಜನೆಯಾಗುತ್ತದೆ, ಸಾಧಿಸುವ ಛಲ, ಉನ್ನತ್ತ ಗುರಿಯನ್ನಿಟ್ಟುಕೊಳ್ಳಬೇಕು, ಮಕ್ಕಳಲ್ಲಿ ಕನಸುಗಳು ಇರಬೇಕು, ಕನಸುಗಳು ನಮ್ಮನ್ನು ಗುರಿಯೆಡೆಗೆ ಕೊಂಡೊಯ್ಯುತ್ತದೆ ಎಂದರು.
ಕಂಟ್ರೋಲ್ ರೂಮ್-೧೦೦ ಕುರಿತು ಮಾಹಿತಿ ನೀಡಿದ ಅವರು, ಮಕ್ಕಳು, ಮಹಿಳೆಯರು ಭಯಮುಕ್ತರಾಗಿ ನೇರವಾಗಿ ಸ್ಥಳೀಯ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಹುಟ್ಟಿನಿಂದ ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಿಗೆ ಅಂಗನವಾಡಿ ಹಾಗೂ ಶಾಲೆಗಳಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ರೋಗ ಲಕ್ಷಣಗಳನ್ನು ವಿವರಿಸಿ, ಚಿಕಿತ್ಸೆಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಲ್ಲಿ ಮತ್ತು ಆರೋಗ್ಯ ಕರ್ನಾಟಕ ಕಾರ್ಡ್ ಮೂಲಕ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಹಾಗೂ ಆಯ್ದ ಖಾಸಾಗಿ ಆಸ್ಪತ್ರೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಆರೋಗ್ಯ ಇಲಾಖೆ ಆರ್.ಬಿ.ಎಸ್.ಕೆ ವಿಭಾಗದ ವೈದ್ಯಾಧಿಕಾರಿ ಡಾ. ಹೇಮಾ ಪ್ರಭಾ ಮಾಹಿತಿ ನೀಡಿದರು.
ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಪೋಷಕತ್ವ ಸಹಾಯ ಧನ, ಮಗು ದತ್ತು ಪಡೆಯುವ ಬಗ್ಗೆ, ಬಾಲ್ಯವಿವಾಹ, ಬಾಲ ನ್ಯಾಯ ಕಾಯಿದೆ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕುಮಾರ್ ಶೆಟ್ಟಿಗಾರ್, ಆರೋಗ್ಯ ಇಲಾಖೆಯ ಸವಲತ್ತು ಕುರಿತು ಆರೋಗ್ಯ ಇಲಾಖೆಯ ಪಿ.ಪಿ.ಜಲಜಾಕ್ಷಿ ಮಾಹಿತಿಯನ್ನು ನೀಡಿದರು.
ಚೈಲ್ಡ್ ಲೈನ್ –1098 ನಗರ ಸಂಯೋಜಕ ಯೋಗೀಶ್ ಮಲ್ಲಿಗೆಮಾಡು ಪ್ರಸ್ತಾವಿಕವಾಗಿ ಮಾತನ್ನಾಡಿದರು, ಚೈಲ್ಡ್ ಲೈನ್ –1098 ನ ಜಯಂತಿ ಕೋಕಳ, ರೇವತಿ ಹೊಸಬೆಟ್ಟು, ಕೀರ್ತೀಶ್ ಕಲ್ಮಕಾರು ಗುಂಪು ಚರ್ಚೆಯನ್ನು ನಡೆಸಿದರು.
ಕಾರ್ಯಕ್ರಮವನ್ನು ನಾಗರಾಜ್ ಪಣಕಜೆ ನಿರೂಪಿಸಿ, ಮುಖ್ಯೋಪಧ್ಯಾಯರಾದ ಹರೀಶ್ ಕುಮಾರ್.ಬಿ.ಎಂ. ಸ್ವಾಗತಿಸಿ, ಶಿಕ್ಷಕ ಪ್ರಾನ್ಸಿಸ್ಸ್ ಡೇಸಾ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಕರೀಂ, ಪ್ರೌಢ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಆಚಾರ್ಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಬ್ರಾಹಿಂ.ಎ, ಮುಖ್ಯಶಿಕ್ಷಕ ಹರೀಶ್ ಕುಮಾರ್.ಬಿ.ಎಂ. ಪ್ರೌಢ ಶಾಲಾ ಮುಖ್ಯಶಿಕ್ಷಕ ಉದಯ ಕುಮಾರ್, ಆರೋಗ್ಯ ಇಲಾಖೆಯ ಆರ್.ಬಿ.ಎಸ್.ಕೆ ಡಾ. ಮಹಮ್ಮದ್ ಮುಕ್ತಾಫ್, ಚೈಲ್ಡ್‌ಲೈನ್ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಆಪ್ತಸಮಾಲೋಚಕಿ ರೇಖಾ ಶ್ರೀನಿವಾಸ್ ನರೂರ್, ಚೈಲ್ಡ್‌ಲೈನ್‌ನ ಆಶಾಲತಾ, ಅಸುಂತಾ, ಪೊಲೀಸ್ ಇಲಾಖೆಯ ವಿಶಾಲಾಕ್ಷಿ.ಕೆ. ಮತ್ತು ಹನುಮಂತ.ಟಿ. ಉಪಸ್ಥಿತರಿದ್ದರು.
Be the first to comment on "ನಂದಾವರ ಶಾಲೆಯಲ್ಲಿ ತೆರೆದ ಮನೆ"