
ಮಾನವ ಸೇರಿದಂತೆ ಸಕಲ ಜೀವರಾಶಿಗಳಿಗೆ ಆಧಾರವಾಗಿರುವ ಈ ಭೂಮಿಯನ್ನು ಮಾಲಿನ್ಯಗಳಿಂದ ರಕ್ಷಿಸಬೇಕಾದದು ನಮ್ಮ ಕರ್ತವ್ಯ . ಭಾರತೀಯ ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನ ತರಬೇತಿಯೊಂದಿಗೆ ವಿವಿಧ ಸಮಾಜೋಪಯೊಗಿ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಸಿಕೊಂಡಿದೆ, ಈ ನಿಟ್ಟಿನಲ್ಲಿ ಜೋಡುಮಾರ್ಗ ನೇತ್ರಾವತಿ ಜೂನಿಯರ್ ಛೇಂಬರ್ ತರಬೇತಿ ಕಾರ್ಯಕ್ರಮಗಳಿಗೆ ಪ್ರಸ್ತುತ ವರ್ಷ ಶಂಭೂರು ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ ಎಂದು ಎಂದು ಜೇಸಿ ವಲಯ ಉಪಾಧ್ಯಕ್ಷರಾದ ಪಶುಪತಿ ಶರ್ಮ ಹೇಳಿದರು.
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಜೋಡುಮಾರ್ಗ ನೇತ್ರಾವತಿ ಜೂನಿಯರ್ ಛೇಂಬರ್ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಮತ್ತು ‘ಒಂದು ಘಟಕ ಒಂದು ಶಾಲೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.
ಜೇಸಿ ಅಧ್ಯಕ್ಷೆ ಸವಿತಾ ನಿರ್ಮಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ, ದ.ಕ ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ನಿಯೋಜಿತ ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ, ಜೇಸೀ ಉಪಾಧ್ಯಕ್ಷರಾದ ರವೀಂದ್ರ ಕುಕ್ಕಾಜೆ ಜೇಸಿ ಉಪಾಧ್ಯಕ್ಷರಾದ ರವೀಂದ್ರ ಕುಕ್ಕಾಜೆ, ಜೇಸಿರೆಟ್ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಶಾಲಾ ಇಕೋ ಕ್ಲಬ್ ನೋಡಲ್ ಶಿಕ್ಷಕಿ ಭಾರತಿಹರೀಶ್, ಜೇಜೆಸಿ ಅಧ್ಯಕ್ಷೆ ದಿವ್ಯಾ, ಇಂಟರಾಕ್ಟ ಕ್ಲಬ್ ಅಧ್ಯಕ್ಷ ದರ್ಶಿತ್, ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವಿವಿಧ ಔಷಧಿಯ ಗಿಡಗಳನ್ನು ನೆಟ್ಟರು. ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ ವಿಷಯದಲ್ಲಿ ನಡೆದ ಭಾಷಣ ಸ್ಫರ್ಧೆಯಲ್ಲಿ ದರ್ಶಿತ್ ಪ್ರಥಮ ಸ್ಥಾನ, ನೇಹಾ ದ್ವಿತೀಯ, ಪಾವನಾ ತೃತೀಯ ಹಾಗೂ ಪವನ್ ರಾಜ್ ,ವಿಶ್ಮಿತಾ, ಹರ್ಷಿತಾ ಪ್ರೋತ್ಸಾಹಕರ ಬಹುಮಾನ ಪಡೆದರು.
ಶಿಕ್ಷಕ ಹರಿಪ್ರಸಾದ್ ಕುಲಾಲ್ ಪ್ರಸ್ತಾವಿಸಿ, ಸ್ವಾಗತಿಸಿದರು, ಶಾಲಾ ನಾಯಕ ಪವನ್ ರಾಜ್ ವಂದಿಸಿದರು, ವಿದ್ಯಾರ್ಥಿ ಪಾವನಾ ನಿರುಪಿಸಿದರು.


Be the first to comment on "ಜೇಸಿಯಿಂದ ಒಂದು ಘಟಕ, ಒಂದು ಶಾಲೆ"