ಕಳ್ಳಿಗೆ ಗ್ರಾಮದ ನೆತ್ತರಕೆರೆಯ ದ.ಕ.ಜಿಪಂ ಹಿ.ಪ್ರಾ.ಶಾಲೆಯ ಶಾಲಾ ಪ್ರಾರಂಭೋತ್ಸವ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಮುಂಡಾಜೆಗುತ್ತು ವಿಠಲ ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಗೆ ನೆರವು ನೀಡಿದ ದಾನಿಗಳು ಮತ್ತು ನವೋದಯ ಮಿತ್ರ ವೃಂದದ ಕಾರ್ಯವನ್ನು ಶ್ಲಾಘಿಸಿದರು. ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್, ದಾನಿಗಳಾದ ಜ್ಯೋತೀಂದ್ರ ಪ್ರಸಾದ್ ಶೆಟ್ಟಿ, ಮುಂಡಾಜೆಗುತ್ತು, ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ನಾರಾಯಣ ಹೊಳ್ಳ ನೆತ್ತರಕೆರೆ, ಶಾಲಾಭಿವೃದ್ಧಿಯ ಮೇಲುಸ್ತುವಾರಿ ಭಾಸ್ಕರ ಎನ್, ನವೋದಯ ಮಿತ್ರ ವೃಂದದ ಅಧ್ಯಕ್ಷ ಬಿ.ಸುರೇಶ ಭಂಡಾರಿ ಅರ್ಬಿ, ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ಸರಸ್ವತಿ ಹೊಳ್ಳರಬೈಲು ಉಪಸ್ಥಿತರಿದ್ದರು. ದಾಮೋದರ ನೆತ್ತರಕೆರೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಗುಣರತ್ನ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಶಾಸಕರನ್ನು ಸನ್ಮಾನಿಸಲಾಯಿತು.
Be the first to comment on "ಕಳ್ಳಿಗೆ ನೆತ್ತರಕೆರೆಯಲ್ಲಿ ಉಚಿತ ಪುಸ್ತಕ ವಿತರಣೆ"