ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಕೊಳ್ನಾಡು ಅಬ್ದುಲ್ ರಜಾಕ್ ಎಂಬಾತನನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕು ಮಂಚಿ ಗ್ರಾಮದ ನಾಡಾಜೆ ಎಂಬಲ್ಲಿ ಅಕ್ರಮವಾಗಿ ಪರವಾನಿಗೆ ರಹಿತ ಸುಮಾರು 4 ಲಕ್ಷ ರೂ ಮೌಲ್ಯದ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ವನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಗಳನ್ನು ವಶಪಡಿಸಿಕೊಂಡರು.
ಈ ಸಂದರ್ಭ ಚಾಲಕ ಕೊಳ್ನಾಡು ಅಬ್ದುಲ್ ರಜಾಕ್ ಎಂಬಾತನನ್ನು ಬಂಧಿಸಲಾಯಿತು. ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾನೆ. ಕಾರ್ಯಚರಣೆ ಯಲ್ಲಿ ವಲಯ ಅರಣ್ಯಾಧಿಕಾರಿ ಸುರೇಶ್ ಬಿ. ಉಪವಲಯಾರಣ್ಯಾಧಿಕಾರಿ ಪ್ರೀತಂ ಅರಣ್ಯ ರಕ್ಷಕರಾದ ಜಿತೇಶ್ ಪಿ, ದಯಾನಂದ , ವಿನಯಕುಮಾರ್, ಶಿವಲಿಂಗ ಸ್ವಾಮಿ ಭಾಗವಸಿದ್ದರು. ಮುಂದಿನ ತನಿಖೆಯನ್ನು ಉಪಾರಣ್ಯ ಸಂರಕ್ಷಣಾಧಿಕಾರಿ ಡಾ! ಕರಿಕಲನ್ ಅವರ ಮಾರ್ಗದರ್ಶನ ದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಗೌಡ ನಡೆಸುತ್ತಿದ್ದಾರೆ.
Be the first to comment on "ಮರದ ದಿಮ್ಮಿ ಅಕ್ರಮ ಸಾಗಾಟ ಪತ್ತೆ"