ತ್ಯಾಜ್ಯ ಎಸೆದರೆ ಕಟ್ಟುನಿಟ್ಟಿನ ಕ್ರಮ: ಪುರಸಭೆ ಎಚ್ಚರಿಕೆ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಪುರಸಭಾ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ತ್ಯಾಜ್ಯ ವಿಲೇವಾರಿಯ ವಾಹನಗಳು ಬಾರದೇ ಇದ್ದರೆ ಪುರಸಭೆ ಸಂಪರ್ಕಿಸಬೇಕು, ಅದಕ್ಕೆ ಹೊರತಾಗಿ ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯುವುದಲ್ಲ ಎಂದು ತಿಳಿಸಿದ್ದಾರೆ.

ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್, ಗೂಡಂಗಡಿ, ಪಾಸ್ಟ್‌ಫುಡ್ ವ್ಯಾಪಾರಸ್ಥರು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು (ಕಸವನ್ನು) ಬಿ.ಸಿ.ರೋಡ್ ಗಾಣದಪಡ್ಪು ಸ್ಥಳದಲ್ಲಿ ರಾತ್ರಿ ಸಮಯದಲ್ಲಿ ತಂದು ಸುರಿಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ತೊಂದರೆಯಾಗುತ್ತಿದೆ. ಬಿ.ಸಿ.ರೋಡ್ ಗಾಣದಪಡ್ಪು ಸ್ಥಳದಲ್ಲಿ ಕಸವನ್ನು ತಂದು ಹಾಕಿರುವವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಂಡು ದಂಡನೆ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನಿಯಮಿತವಾಗಿ ವಾಹನಗಳು ಬರದಿದ್ದಲ್ಲಿ ಪುರಸಭೆಯ ಮುಖ್ಯಾಧಿಕಾರಿಯವರಿಗೆ (ದೂ:9449805561) ಅಥವಾ ಹಿರಿಯ ಆರೋಗ್ಯ ನಿರೀಕ್ಷಕ (ದೂ:9448147697 ಇವರಿಗೆ ದೂರು ನೀಡಬಹುದಾಗಿ ಪುರಸಭೆ ಪ್ರಕಟಣೆ ತಿಳಿಸಿದೆ.

ಕಸ ವಿಲೇವಾರಿ ಬಸ್ ನಿಲ್ದಾಣ ಪಕ್ಕ ಮಾದರಿ

ತ್ಯಾಜ್ಯವನ್ನು ಎಲ್ಲೆಂದರಲ್ಲ ಎಸೆಯುವ ಜನರ ವಿರುದ್ಧ ಸಮಾನ ಮನಸ್ಕರೊಂದಿಗೆ ಸೇರಿ ಬಿ.ಸಿ.ರೋಡ್ ಬಸ್ ನಿಲ್ದಾಣ ಬಳಿಯ ಉದ್ಯಮಿ ಸುನಿಲ್ ಮತ್ತಿತರರು ಲಯನ್ಸ್ ಸಂಸ್ಥೆಯೊಂದಿಗೆ ನಡೆಸಿದ ಪ್ರಯತ್ನ ಫಲ ನೀಡಿದೆ. ಬಿ.ಸಿ.ರೋಡ್ ಸಾರ್ವಜನಿಕ ಬಸ್ ನಿಲ್ದಾಣದ ಹಿಂಬದಿ ತ್ಯಾಜ್ಯ ಎಸೆಯುವುದರಿಂದ ಮೂಗು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಸ ಎಸೆಯುವವರು ಯಾರು ಎಂಬುದೇ ಗೊತ್ತಾಗದಂಥ ಪರಿಸ್ಥಿತಿ ಇದ್ದಾಗ, ಸಿಸಿ ಕ್ಯಾಮರಾ ಹಾಕಲಾಯಿತು. ಆ ಜಾಗದಲ್ಲಿ ವಾಹನಗಳು ನಿಲ್ಲಲಾರಂಭಿಸಿದವು. ಕ್ರಮೇಣ ಕಸ ಎಸೆಯುವ ಕೈಗಳು ಹಿಂತೆಗೆದವು. ಈಗ ನಮ್ಮ ಪರಿಸರ ಚೊಕ್ಕಟವಾಗಿದೆ. ಬಸ್ ನಿಲ್ದಾಣದ ಪಕ್ಕ ಕಸ ಎಸೆಯುವವರಿಲ್ಲ ಎನ್ನುತ್ತಾರೆ ಸ್ಥಳೀಯ ಉದ್ಯಮಿ ಅಪೂರ್ವ ಜ್ಯುವೆಲರ್ಸ್ ನ ಸುನಿಲ್.

ಮಳೆಗಾಲಕ್ಕೆ ತಯಾರಿ:

ಕೆಲವು ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಮುಂಜಾಗೃತಾ ಕ್ರಮವಾಗಿ ತಮ್ಮ ತಮ್ಮ ವಾಣಿಜ್ಯ ಪ್ರದೇಶ ಮತ್ತು ವಾಸದ ಮನೆಗಳ ಸುತ್ತಮುತ್ತ ಎಳನೀರು, ತೆಂಗಿನ ಚಿಪ್ಪುಗಳನ್ನು ತೆರೆದ ಸ್ಥಿತಿಯಲ್ಲಿ ಇರಿಸದೇ ನೀರು ನಿಲ್ಲದಂತೆ ತುಂಡರಿಸಿ ಗುಂಡಿಯಲ್ಲಿ ಹಾಕಿ ಮುಚ್ಚುವುದು. ಹಳೇ ಟಯರ್‌ಗಳಲ್ಲಿ ನೀರು ನಿಲ್ಲದಂತೆ ತಮ್ಮ ವಠಾರದ ಸುತ್ತಲೂಎಚ್ಚರ ವಹಿಸಬೇಕು ಎಂದು ಪುರಸಭೆ ಸೂಚಿಸಿದೆ.

ಗುಜುರಿ ಹಳೇ ಸಾಮಾಗ್ರಿ ಮಾರಾಟಗಾರರು ತಮ್ಮ ಸಾಮಾಗ್ರಿಗಳಲ್ಲಿ ಯಾವುದೇ ತರಹದ ನೀರು ನಿಲ್ಲದಂತೆ ಎಚ್ಚರವಹಿಸುವುದು. ಯಾವುದೇ ತರದ ನೀರು ನಿಲ್ಲಲು ಅವಕಾಶ ನೀಡಬಾರದು. ತೋಟಗಳಿರುವ ಪ್ರದೇಶದಲ್ಲಿ, ಅಡಿಕೆ ಹಾಳೆಗಳು ಬಾಳೆ ಎಲೆಗಳಲ್ಲಿ ನೀರು ನಿಂತು ಸೊಳ್ಳೆಗಳ ಸಂತಾನಾಭಿವೃದ್ಧಿಯಾಗದಂತೆ, ಅವುಗಳನ್ನು 2 ದಿನಗಳಿಗೊಮ್ಮೆ ಆದ್ಯತೆ ಮೇರೆಗೆ ತಿರುವು ಹಾಕಲು ಕ್ರಮ ಕೈಗೊಳ್ಳುವುದು. ಸಾರ್ವಜನಿಕರು ಸೊಳ್ಳೆಯ ಕಡಿತ ನಿವಾರಿಸಲು ಸೊಳ್ಳೆ ಪರದೆಯನ್ನು ಉಪಯೋಗಿಸುವುದು. ಸಂಜೆ 6 ಗಂಟೆಯ ಒಳಗಡೆ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಬೇಕು ಎಂದು ಪುರಸಭೆ ವಿನಂತಿಸಿದೆ.

ಘನತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೇ, ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳಿಗೆ ನೀಡಬೇಕು. ತಮ್ಮ ತಮ್ಮ ಮನೆಗಳ ಸುತ್ತಲೂ ಮಳೆ ನೀರು ನಿಲ್ಲದಂತೆ ಗಮನ ಹರಿಸಬೇಕು. ಪರಿಸರ ಸ್ವಚ್ಛವಾಗಿ ಇಡಬೇಕು. ಮಳೆಗಾಲದಲ್ಲಿ ನೀರಿನ ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ನೀರು ಖಾಲಿ ಮಾಡಬೇಕು ಎಂದು ಪುರಸಭೆ ಹೇಳಿದೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ತ್ಯಾಜ್ಯ ಎಸೆದರೆ ಕಟ್ಟುನಿಟ್ಟಿನ ಕ್ರಮ: ಪುರಸಭೆ ಎಚ್ಚರಿಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*