ಚಿಣ್ಣರ ಬಳಗ ಮಂಗಳೂರು ಹಾಗೂ ಕಾಮಧೇನು ಗೋ ಆಶ್ರಮ ಟ್ರಸ್ಟ್ ವತಿಯಿಂದ ಮಂಗಳೂರು ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪರಿಸರದೊಂದಿಗೆ ಚಿಣ್ಣರು ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ಯ ಗ್ರೀನ್ ವುಡ್ ಫಾರ್ಮ್ಸ್ ನಲ್ಲಿ ನಡೆಯಿತು.
ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು. ಮಕ್ಕಳಿಗೆ ಪರಿಸರದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಪರಿಸರದ ಮಡಿಲಲ್ಲಿ ಕುಣಿದು ಕುಪ್ಪಳಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಂಗ ಕಲಾವಿದ ಮೌನೇಶ್ ವಿಶ್ವಕರ್ಮ ಅವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಪಕ್ಷಿ ಸಂಕುಲದ ಬಗ್ಗೆಯೂ ಮಾಹಿತಿ ನೀಡಲಾಯಿತು. ಸದಾ ಕಾಂಕ್ರೀಟ್ ಕಾಡುಗಳ ಮಧ್ಯೆ ವಾಸಿಸುವ ನಗರದ ಪ್ರದೇಶದ ವಿದ್ಯಾರ್ಥಿಗಳು ದಟ್ಟ ಕಾಡು ಅರಣ್ಯದ ಮದ್ಯೆ ಇರುವ ಗ್ರೀನ್ ವುಡ್ ಫಾರ್ಮ್ಸ್ ನಲ್ಲಿ ಹಸಿರು ಪರಿಸರದೊಂದಿಗೆ ಸಂತಸದ ದಿನವನ್ನು ಕಳೆದರು.
Be the first to comment on "ಹಳ್ಳಿ ತೋಟದಲ್ಲಿ ಪೇಟೆ ಮಕ್ಕಳ ವಿಹಾರ"