ವಿಟ್ಲದ ಮೇಗಿನಪೇಟೆ ಅಲ್‌ಖೈರ್ ಮಹಿಳಾ ಶರೀಯತ್ ಕಾಲೇಜಿನ ಶಿಕ್ಷಕ-ರಕ್ಷಕರ ಸಭೆಯು ಮೇಗಿನಪೇಟೆ ಹಯಾತುಲ್ ಇಸ್ಲಾಂ ಮದರಸದಲ್ಲಿ ಶನಿವಾರ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಅಬ್ದುಲ್ ಸಲಾಂ ಲತೀಫಿ ಕೊಡುವಳ್ಳಿ ಕೇರಳ ದುವಾಃ ಆಶೀರ್ವಚನ ನೀಡಿದರು. ಕಾಲೇಜು ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ ಏರ್ ಸೌಂಡ್ಸ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೂರ್ನಡ್ಕ ಜುಮಾ ಮಸೀದಿ ಖತೀಬು ಅಬೂಬಕ್ಕರ್ ಸಿದ್ದೀಕ್ ಜಲಾಲಿ ಅವರು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಹಾಗೂ ರಕ್ಷಕರ ಪಾತ್ರ ಮಹತ್ವದಾಗಿದೆ. ಶರೀಯತ್ ಕಾಲೇಜುಗಳ ಮೂಲಕ ಇಸ್ಲಾಮಿನ ಆದರ್ಶ ಹಾಗೂ ವಿಧಿವಿಧಾನಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೆತ್ತವರ ಹಾಗೂ ಶಿಕ್ಷಕರ ಪ್ರೀತಿಗಳಿಸಿದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಲೇಜು ಶಿಕ್ಷಕರಾದ ಅಬ್ದುಲ್ ರಹಿಮಾನ್ ಫೈಝಿ ಪರ್ತಿಪ್ಪಾಡಿ, ಅಬ್ಬಾಸ್ ದಾರಿಮಿ ಕೆಲಿಂಜ, ಹಕೀಂ ಅರ್ಶದಿ ಪರ್ತಿಪ್ಪಾಡಿ, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಇಬ್ರಾಹಿಂ ಹಾಜಿ ಪೊನ್ನೋಟ್ಟು, ಶರೀಫ್ ಮೂಸ ಕುದ್ದುಪದವು ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಅಲ್‌ಖೈರ್ ಮಹಿಳಾ ಶರೀಯತ್ ಕಾಲೇಜಿನ ಶಿಕ್ಷಕ-ರಕ್ಷಕರ ಸಭೆ"