ಸಂಗಬೆಟ್ಟು, ಕುಕ್ಕಿಪ್ಪಾಡಿ, ಚೆನ್ನೈತ್ತೋಡಿ, ರಾಯಿ, ಪಂಜಿಕಲ್ಲು ಹಾಗೂ ಅಮ್ಟಾಡಿ, ಅರಳ ಗ್ರಾಮ ಪಂಚಾಯತು ವ್ಯಾಪ್ತಿಯ 17 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲು ಅನುಷ್ಠಾನಕ್ಕೆ ತಂದ 26.07 ಕೋಟಿ ರೂಪಾಯಿ ವೆಚ್ಚದ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸಿದ್ದಕಟ್ಟೆ – ಮೂಡುಬಿದಿರೆ ರಸ್ತೆ ಸೇರಿದಂತೆ ಪರಿಸರದ ರಸ್ತೆಗಳ ಅಭಿವೃದ್ಧಿ, ಹೀಗೆ ಹಲವು ಯೋಜನೆಗಳನ್ನು ಈ ಭಾಗಕ್ಕೆ ನೀಡಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಹೇಳಿದರು.
ಅವರು ಸಿದ್ಧಕಟ್ಟೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಿರುಸಿನ ಚುನಾವಾಣಾ ಪ್ರಚಾರಕೈಗೊಂಡಿದ್ದ ಸಂದರ್ಭದಲ್ಲಿ ಕರ್ಪೆಯಲ್ಲಿ ಮಾತಾನಾಡಿದರು.
ರಾಯಿ- ಮೂರ್ಜೆ ರಸ್ತೆಯ ಅಗಲೀಕರಿಸಿ ಡಾಮರೀಕರಣ, ಎಡಪದವು ಕುಪ್ಪೆಪದವು ಆರ್ಲ ಸೋರ್ನಾಡು ರಸ್ತೆಯ ಅಭಿವೃದ್ಧಿ,ವೇಣೂರು-ಮೂರ್ಜೆ ರಸ್ತೆ ಅಭಿವೃದ್ಧಿ, ಮೂಡುಬಿದರೆ – ಬಂಟ್ವಾಳ ರಸ್ತೆಯ ಸಿದ್ಧಕಟ್ಟೆ ಪೇಟೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣ. ಸಿದ್ಧಕಟ್ಟೆ-ಕರ್ಪೆ-ಅಣ್ಣಳಿಕೆ ಗ್ರಾಮೀಣ ರಸ್ತೆ ಅಭಿವೃದ್ಧಿ, ಸಿದ್ಧಕಟ್ಟೆ – ಹೊಕ್ಕಾಡಿಗೋಳಿ – ಮಾವಿನಕಟ್ಟೆ – ಅಜ್ಜಿಬೆಟ್ಟು ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ದೇವಪ್ಪ ಕರ್ಕೇರಾ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ನೀರು, ರಸ್ತೆ ಅಭಿವೃದ್ಧಿಗೆ ಗರಿಷ್ಠ ಶ್ರಮ: ಸಿದ್ಧಕಟ್ಟೆಯಲ್ಲಿ ರಮಾನಾಥ ರೈ"