ದೇಶದ ಪ್ರಗತಿಗೆ ಪ್ರತಿಯೊಬ್ಬ ನಾಗರಿಕನೂ ಕರ್ತವ್ಯಪ್ರಜ್ಞೆಯರಿತು ಕಾರ್ಯ ನಿರ್ವಹಿಸಬೇಕು ಎಂದು ಜೇಸಿ ರಾಷ್ಟ್ರೀಯ ತರಬೇತುದಾರ ಸತೀಶ್ ಭಟ್ ಬಿಳಿನೆಲೆ ಹೇಳಿದರು.
ಜೇಸೀ ಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳ ದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಜೇಸೀ ಐ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ ಸವಿತಾ ನಿರ್ಮಲ್ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಜೇಸೀ ಪೂರ್ವಾಧ್ಯಕ್ಷರಾದ ಅಹ್ಮದ್ ಮುಸ್ತಾಫ, ಕಾರ್ಯದರ್ಶಿ ಹರ್ಷರಾಜ್, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಯುವ ಜೇಸಿ ಅಧ್ಯಕ್ಷೆ ದಿವ್ಯಾ ಉಪಸ್ತಿತರಿದ್ದರು. ಪೂರ್ವಾಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಮುಂಡಾಜೆ ಮತ್ತು ಸದಸ್ಯ ಜಯರಾಜ ಬಂಗೇರ ಅಭಿಪ್ರಾಯ ಮಂಡಿಸಿದರು. ಜೇಸಿ ಧೀರಜ್, ಶನ್ ಪತ್ ಷರೀಪ್ ಕಾರ್ಯಕ್ರಮ ಸಂಯೋಜಿಸಿದ್ದರು.
Be the first to comment on "ಕ್ರಿಯಾಶೀಲ ನಾಗರಿಕ ತರಬೇತಿ ಕಾರ್ಯಾಗಾರ"