ಈ ಬಾರಿಯ ಮತದಾನ ಬಂಟ್ವಾಳದ ಭವಿಷ್ಯವನ್ನು ನಿರ್ಧರಿಸುತ್ತದೆ. ಅದಕ್ಕಾಗಿ ಸಂಘಟಿತ ಪ್ರಯತ್ನದಿಂದ ಮತದಾನ ಮಾಡಿ, ಬಿಜೆಪಿಯನ್ನು ಗೆಲ್ಲಿಸಿ ಎಂದು ವಿಧಾನಸಭಾ ಚುನಾವಣೆಯ ಬಂಟ್ವಾಳ ಕ್ಷೇತ್ರ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಾಳ್ತಿಲ ಗ್ರಾಮದ ಸುಧೆಕಾರ್ನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ. ಬಂಟ್ವಾಳದಲ್ಲಿ ಭಯದ ವಾತವರಣವಿದ್ದು ಕಳೆದ 30 ವರ್ಷಗಳಿಂದ ಆಡಳಿತದಲ್ಲಿರುವ ಕಾಂಗ್ರೇಸ್ ಪಕ್ಷವೇ ಈ ಎಲ್ಲಾ ಪರಿಸ್ಥಿತಿಗಳಿಗೆ ಕಾರಣ. ಅದಕ್ಕಾಗಿ ಈ ಬಾರಿ ಮತದಾರರು ಭಯ–ಮುಕ್ತ ಬಂಟ್ವಾಳ ಶಾಂತಿ ಸಾಮರಸ್ಯದ ಬಂಟ್ವಾಳಕ್ಕಾಗಿ ಬಿಜೆಪಿ ಅಭ್ಯರ್ಥಿಗಳಾದ ಯು.ರಾಜೇಶ್ ನಾಯ್ಕ್ರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸಮಾವೇಶಕ್ಕೆ ಮುನ್ನ ಬಾಳ್ತಿಲದಲ್ಲಿ ಮನೆ ಬೇಟಿ ಮಾಡಿ ಉಳಿಪ್ಪಾಡಿ ರಾಜೇಶ್ ನಾಯ್ಕ್ಮತಯೊಚನೆ ಮಾಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀಗೋಪಾಲಚಾರ್ಯ, ಜಿ.ಪಂ ಮಾಜಿ ಸದಸ್ಯರಾದ ಆರ್ ಚೆನ್ನಪ್ಪ ಕೋಟ್ಯಾನ್, ಸುಂದರ ಸಾಲ್ಯಾನ್, ಸುರೇಶ್ ಶೆಟ್ಟಿ, ಆನಂದ ಶೆಟ್ಟಿ ,ಶ್ರೀಧರ್ ಶೆಟ್ಟಿ ,ದಿನೇಶ್ ಅಮ್ಟೂರು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳದ ಭವಿಷ್ಯ ಬದಲಾಯಿಸಲು ಮತದಾನ ಮಾಡಿ: ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು"