www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸ್ಪರ್ಧಾಳುಗಳ ಲಿಸ್ಟ್ ಅಂತಿಮವಾಗಿದೆ. ಎಲ್ಲ ಶಾಸಕರೂ ಮರುಸ್ಪರ್ಧೆಗಿಳಿದರೆ, ಕಳೆದ ಬಾರಿ ಸ್ಪರ್ಧೆಗಿಳಿದು ಸೋತವರೂ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿವುದು ಗಮನಾರ್ಹ.
ಕಾಂಗ್ರೆಸ್ ನಲ್ಲಿ ಹಾಲಿ ಶಾಸಕರಿಗೆ ಅವಕಾಶ, ಡಾ. ರಘು ಮತ್ತೆ ಸ್ಪರ್ಧೆ
ರಮಾನಾಥ ರೈ (ಬಂಟ್ವಾಳ), ಯು.ಟಿ.ಖಾದರ್ (ಮಂಗಳೂರು), ವಸಂತ ಬಂಗೇರ (ಬೆಳ್ತಂಗಡಿ), ಶಕುಂತಳಾ ಶೆಟ್ಟಿ(ಪುತ್ತೂರು), ಜೆ.ಆರ್. ಲೋಬೊ (ಮಂಗಳೂರು ದಕ್ಷಿಣ), ಮೊಯ್ದೀನ್ ಬಾವ (ಮಂಗಳೂರು ಉತ್ತರ), ಅಭಯಚಂದ್ರ ಜೈನ್ (ಮೂಡುಬಿದಿರೆ) ಹಾಲಿ ಶಾಸಕರೂ ಆಗಿದ್ದಾರೆ. ಇವರೆಲ್ಲ ಮತ್ತೆ ಸ್ಪರ್ಧೆಗಿಳಿದರೆ, ಡಾ. ರಘು ಸುಳ್ಯ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆಗಿಳಿದಿದ್ದಾರೆ. ಅವರು ಕಳೆದ ಬಾರಿ ನಿಕಟ ಸ್ಪರ್ಧಿಯಾಗಿದ್ದರು.
ಬಿಜೆಪಿಯಲ್ಲೂ ಹಾಲಿ ಶಾಸಕರಿಗೆ ಅವಕಾಶ, ಹೊಸಬರಿಗೆ ಛಾನ್ಸ್
ಬಿಜೆಪಿಯಲ್ಲಿರುವ ಏಕೈಕ ಶಾಸಕ ಅಂಗಾರ. ಅವರು ಮತ್ತೆ ಸ್ಪರ್ಧೆಗಿಳಿದಿದ್ದರೆ, ಕಳೆದ ಬಾರಿ ಸ್ಪರ್ಧೆಗಿಳಿದಿದ್ದ ರಾಜೇಶ್ ನಾಯ್ಕ್ (ಬಂಟ್ವಾಳ), ಸಂಜೀವ ಮಠಂದೂರು (ಪುತ್ತೂರು), ಉಮಾನಾಥ ಕೋಟ್ಯಾನ್ (ಮೂಡುಬಿದಿರೆ) ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ. ಮಂಗಳೂರು ಕ್ಷೇತ್ರದಿಂದ ಸಂತೋಷ್ ಕುಮಾರ್ ರೈ ಬೋಳಿಯಾರು, ಮಂಗಳೂರು ದಕ್ಷಿಣ ಕ್ಷೇತ್ರದಿಂದ ವೇದವ್ಯಾಸ ಕಾಮತ್ , ಮಂಗಳೂರು ಉತ್ತರ ಕ್ಷೇತ್ರದಿಂದ ಡಾ. ಭರತ್ ಶೆಟ್ಟಿ ಮತ್ತು ಬೆಳ್ತಂಗಡಿ ಕ್ಷೇತ್ರದ ಹರೀಶ್ ಪೂಂಜ ಅವರಿಗೆ ಇದು ಮೊದಲ ಸ್ಪರ್ಧೆ.
ರಾಜಕೀಯದ ಸ್ಥಿತ್ಯಂತರಗಳ ಪರಿಣಾಮ ಸುಮಾರು ಮೂವತ್ತು ವರ್ಷಗಳ ಹಿಂದೆ ಬಿಜೆಪಿಯ ಪ್ರಬಲ ಅಭ್ಯರ್ಥಿಯಾಗಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಕೆ.ವಸಂತ ಬಂಗೇರ ಇಂದು ಕಾಂಗ್ರೆಸ್ ಕಟ್ಟಾಳು. ಕಳೆದ ಬಾರಿಯಂತೆ ಈ ಬಾರಿಯೂ ಅಭ್ಯರ್ಥಿ. ಬಿಜೆಪಿಯಿಂದ ಬಂಟ್ವಾಳ ಕ್ಷೇತ್ರದಲ್ಲಿ ಎರಡು ಬಾರಿ ರಮಾನಾಥ ರೈ ವಿರುದ್ಧ ಸ್ಪರ್ಧೆಗಿಳಿದಿದ್ದ ಶಕುಂತಳಾ ಬಳಿಕ ಬಿಜೆಪಿಯಿಂದ ಪುತ್ತೂರು ಶಾಸಕಿಯೂ ಆಗಿದ್ದರು. ರಾಜಕೀಯ ಸ್ಥಿತ್ಯಂತರಗಳ ಬಳಿಕ ಅವರು ಕಾಂಗ್ರೆಸ್ ಸೇರಿದರು. ಶಾಸಕಿಯೂ ಆದರು. ಈಗ ಅವರು ಕಾಂಗ್ರೆಸ್ ಅಭ್ಯರ್ಥಿ.
ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
- ಮಂಗಳೂರು ಉತ್ತರ: ಮೊಯ್ದೀನ್ ಬಾವ (ಕಾಂಗ್ರೆಸ್) ಡಾ. ಭರತ್ ಶೆಟ್ಟಿ (ಬಿಜೆಪಿ)
- ಮಂಗಳೂರು ದಕ್ಷಿಣ: ಜೆ.ಆರ್.ಲೋಬೊ(ಕಾಂಗ್ರೆಸ್), ವೇದವ್ಯಾಸ ಕಾಮತ್ (ಬಿಜೆಪಿ)
- ಮಂಗಳೂರು: ಯು.ಟಿ.ಖಾದರ್ (ಕಾಂಗ್ರೆಸ್), ಸಂತೋಷ್ ಕುಮಾರ್ ರೈ(ಬಿಜೆಪಿ)
- ಬಂಟ್ವಾಳ: ರಮಾನಾಥ ರೈ (ಕಾಂಗ್ರೆಸ್), ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು (ಬಿಜೆಪಿ)
- ಸುಳ್ಯ: ಅಂಗಾರ (ಬಿಜೆಪಿ), ಡಾ. ರಘು (ಕಾಂಗ್ರೆಸ್)
- ಬೆಳ್ತಂಗಡಿ: ವಸಂತ ಬಂಗೇರ (ಕಾಂಗ್ರೆಸ್), ಹರೀಶ್ ಪೂಂಜ (ಬಿಜೆಪಿ)
- ಪುತ್ತೂರು: ಶಕುಂತಳಾ ಶೆಟ್ಟಿ (ಕಾಂಗ್ರೆಸ್), ಸಂಜೀವ ಮಠಂದೂರು (ಬಿಜೆಪಿ)
- ಮೂಡುಬಿದಿರೆ: ಅಭಯಚಂದ್ರ ಜೈನ್ (ಕಾಂಗ್ರೆಸ್), ಉಮಾನಾಥ ಕೋಟ್ಯಾನ್ (ಬಿಜೆಪಿ)
Be the first to comment on "ಚುನಾವಣೆ 2018: ದಕ್ಷಿಣ ಕನ್ನಡದಲ್ಲಿ ಹಳೆಬೇರು, ಹೊಸ ಚಿಗುರು"