ನೇರಳಕಟ್ಟೆ–ಗಣೇಶನಗರ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನೇರಳಕಟ್ಟೆ ಕಲ್ಕುಡ ಕಲ್ಲುರ್ಟಿ ಜಾತ್ರೋತ್ಸವ ಪ್ರಯುಕ್ತ ಸಂಗೀತ ರಸಮಂಜರಿ, ನೃತ್ಯ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮ ದೇವಸ್ಥಾನದ ವಠಾರದ ದಿ. ರಾಕೇಶ್ ನಾಯ್ಕ್ ವೇದಿಕೆಯಲ್ಲಿ ಇತ್ತೀಚೆಗೆ ನಡೆಯಿತು.
ಉದ್ಯಮಿ ಜಗದೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟಚೇತನ್ ರೈ ಮಾಣಿ, ಬಂಟ್ವಾಳ ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ, ಡಾ. ಮನೋಹರ ರೈ, ಸುರತ್ಕಲ್ ಎನ್ಐಟಿಕೆ ದಿನೇಶ್ ನಾಯ್ಕ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ರಾಮಚಂದ್ರ ಮೂಲ್ಯ, ನಿವೃತ್ತ ಸೈನಿಕ ತಿಮ್ಮಯ್ಯ ಗೌಡ, ಪ್ರಗತಿಪರ ಕೃಷಿಕ ಮೋಹನ್ದಾಸ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಜಯಂತ ಆಚಾರ್ಯ, ಮೋಹನ್ ಆಚಾರ್ಯ, ಲೋಕೇಶ್ ಆಚಾರ್ಯ, ಶೀತಲ್ ಕೆ.ವಿ., ಪ್ರಶಾಂತ್ ಬಿ., ಉಪೇಂದ್ರ ಆಚಾರ್ಯ, ಸತೀಶ್ ಆಚಾರ್ಯ, ಕಿರಣ್ ಕುಮಾರ್, ಹರೀಶ್, ಸುನೀನ್, ಶರತ್ ಆಚಾರ್ಯ, ಗೌರೀಶ್, ಭವಿತ್ ಕೆ.ವಿ., ಚಂದ್ರಶೇಖರ್, ಮೋಹನ್ ನಾಯ್ಕ್, ಸುಮಂತ್ ಆಚಾರ್ಯ, ಶಶಿಕಿರಣ್, ಧನುಶ್, ಸಂಕೇತ್, ಸತೀಶ್, ಹರ್ಷಿತ್, ಲಕ್ಷೀಶ್, ಲೋಕೇಶ್ ಆಚಾರ್ಯ, ಶಿವಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.
ರಾಮ್ಪ್ರಕಾಶ್ ವರ್ಮಾಸ್ ಮ್ಯೂಸಿಕಲ್ ತಂಡದಿಂದ ರಸಮಂಜರಿ ಹಾಗೂ ನೇರಳಕಟ್ಟೆ ಶಾರದಾ ಕಲಾ ತಂಡದಿಂದ ನೃತ್ಯ ಸಂಘ್ರಮ ನಡೆಯಿತು.
ಯಂಗ್ ಚಾಲೆಂಜರ್ಸ್ ಸಂಘದ ಅಧ್ಯಕ್ಷ ಬಿಶು ಕುಮಾರ್ ಎನ್. ಸ್ವಾಗತಿಸಿ, ಪ್ರಶಾಂತ್ ವಂದಿಸಿ, ಶಿಕ್ಷಕ ಗೋಪಾಲಕೃಷ್ಣ ನಿರೂಪಿಸಿದರು.
Be the first to comment on "ಯಂಗ್ ಚಾಲೆಂಜರ್ಸ್: ಮೂವರು ಸಾಧಕರಿಗೆ ಸನ್ಮಾನ"