ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಭಾರತೀಯ ಜೈನ್ ಮಿಲನ್ ಬಂಟ್ವಾಳ ಆಶ್ರಯದಲ್ಲಿ ಮಹಾವೀರ ಜಯಂತಿ ಉತ್ಸವದ ತಾಲೂಕು ಮಟ್ಟದ ಕಾರ್ಯಕ್ರಮ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ತಾಲೂಕು ಪ್ರಭಾರ ತಹಶೀಲ್ದಾರ್ ಜೀನ್ ಮೇರಿ ತೌರೋ, ಭಗವಾನ್ ಮಹಾವೀರ ತತ್ವಾದರ್ಶ ಪಾಲನೆಗೆ ಕರೆ ನೀಡಿದರು. ಬಂಟ್ವಾಳ ಜೈನ್‌ಮಿಲನ್ ಅಧ್ಯಕ್ಷ ಬ್ರಿಜೇಶ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಭಾರತೀಯ ಜೈನ್ ಮಿಲನ್ ವಲಯ ೮ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ವಲಯ ನಿರ್ದೇಶಕ ಸುದರ್ಶನ್ ಜೈನ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಜೈನ್ ಮಿಲನ್ ಬಂಟ್ವಾಳ ಕಾರ್ಯದರ್ಶಿ ಗೀತಾ ಜಿನಚಂದ್ರ, ವಿಜಯಕುಮಾರಿ ಇಂದ್ರ, ಅಮರನಾಥ ಅಜಿಲ ಮೊದಲಾದವರು ಉಪಸ್ಥಿತರಿದ್ದರು. ಆದಿರಾಜ ಜೈನ್ ಅಲ್ಲಿಪಾದೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಚಂದ್ರಕಾಂತ ಜೈನ್ ವಂದಿಸಿದರು.
ಇದೇ ಸಂದರ್ಭ ಬಂಟ್ವಾಳ ತಾಲೂಕಿನ 13 ಜೈನಬಸದಿಗಳ ದರ್ಶನದ ವಾಹನ ಜಾಥಾವನ್ನು ಅರಿಗಲ್ಲು ಶ್ರೀಜಿನಚೈತ್ಯಾಲಯದ ಅಮರನಾಥ ಅಜಿಲ ಉದ್ಘಾಟಿಸಿದರು.
Be the first to comment on "ಬಂಟ್ವಾಳದಲ್ಲಿ ತಾಲೂಕು ಮಟ್ಟದ ಮಹಾವೀರ ಜಯಂತಿ"