ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಾರ್ವಜನಿಕರು ಪುರಸಭೆಗೆ ಸಂಬಂಧಿಸಿದ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಗಿ ಶುಲ್ಕ ಮಳಿಗೆ ಬಾಡಿಗೆ ಸಹಿತ ಇನ್ನಿತರ ಶುಲ್ಕಗಳನ್ನು ಯಾರ ಬಳಿಯೂ ಹಣ ನೀಡದೇ ತಾವೇ ಖುದ್ದು ಬ್ಯಾಂಕ್ ನಲ್ಲಿ ಪಾವತಿಸಬೇಕು ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಂದ ಮೂರನೇ ವ್ಯಕ್ತಿಗಳು ಹಣ ಪಡೆದು ಮೋಸಗೊಳಿಸಿದರೆ ಅದಕ್ಕೆ ಜವಾಬ್ದಾರಿ, ನಷ್ಟಕ್ಕೆ ಬಂಟ್ವಾಳ ಪುರಸಭೆ ಹೊಣೆಯಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಸುತ್ತೋಲೆ ಪ್ರಕಾರ, ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ –ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆಯು ಸ್ವೀಕೃತಿ ತಂತ್ರಾಂಶವನ್ನು ಖಜಾನೆ-2 ತಂತ್ರಾಂಶದೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ. ಬಂಟ್ವಾಳ ಪುರಸಭೆಗೆ ಪಾವತಿಸಬೇಕಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಿಗೆ ಶುಲ್ಕ, ಮಳಿಗೆ ಬಾಡಿಗೆ ಮತ್ತು ಇನ್ನಿತರೆ ಸೇವಾ ಶುಲ್ಕವನ್ನು ಏ.2ರಿಂದಸಾರ್ವಜನಿಕರು ಮತ್ತು ಮೂರನೇ ವ್ಯಕ್ತಿಗಳಿಂದ ಸ್ವಿಕರಿಸಲಾಗುವ ಪಾವತಿಗಳನ್ನು ಸ್ವೀಕೃತಿ ತಂತ್ರಾಂಶದ ಮೂಲಕ ಓವರ್ ದ ಕೌಂಟರ್ ಛಲನ್ ಪಡೆದು ನೇರವಾಗಿ ಬ್ಯಾಂಕಿನಲ್ಲಿ ಪಾವತಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Be the first to comment on "ಪುರಸಭೆ ಬಿಲ್ ಮೂರನೇ ವ್ಯಕ್ತಿಗಳಿಗೆ ಪಾವತಿಸಬೇಡಿ: ಬಂಟ್ವಾಳ ಪುರಸಭೆ ಸೂಚನೆ"