ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಶನಿವಾರ ಸಂಜೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ ಘಟಕವನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಉಪನ್ಯಾಸಕ ಮಧುಕರ ಮಲ್ಯ ಉದ್ಘಾಟಿಸಿದರು.
ಪ್ರತಿಯೊಬ್ಬರಿಗೂ ಸಮಾಜದ ಋಣ ತೀರಿಸುವ ಸಾಮಾಜಿಕ ಹೊಣೆ ಇದ್ದು, ಇಂತಹ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಟ್ರಸ್ಟ್ ಸ್ಥಾಪಕಾಧ್ಯಕ್ಷ, ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರ ತ್ಯಾಗಕ್ಕೆ ನಾವು ಋಣಿಯಾಗಿರಬೇಕು. ಅಂತಹ ಸತ್ಪಾತ್ರರನ್ನು ಗುರುತಿಸಿ ಅವರ ಸಾಮಾಜಿಕ ಸ್ಥಾನಮಾನ, ಸೌಕರ್ಯಗಳ ಕುರಿತು ಕಾಳಜಿ ವಹಿಸುವ ಕಾರ್ಯ ಯಕ್ಷಧ್ರುವ ಟ್ರಸ್ಟ್ ಮಾಡುತ್ತಿದೆ ಎಂದರು.
ಟ್ರಸ್ಟ್ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನದ ಕಲಾವಿದರಿಗೆ ಚೈತನ್ಯ ನೀಡುವ ಕಾರ್ಯವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನಡೆಸುತ್ತಿದೆ ಎಂದರು.
ಬೆಳ್ತಂಗಡಿ ಘಟಕ ಅಧ್ಯಕ್ಷ ಭುಜಬಲಿ ಧರ್ಮಸ್ಥಳ ಅವರು ಮಾತನಾಡಿ, ಕಲಾವಿದರನ್ನು ದುಶ್ಚಟಗಳಿಂದ ದೂರವಾಗಿ ಸನ್ನಡತೆಯಿಂದ ನಡೆಸುವ ಕಾರ್ಯವೂ ಯಕ್ಷಧ್ರುವ ಟ್ರಸ್ಟ್ ನಿಂದಾಗಲಿ ಎಂದರು.
ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ. ತುಂಗಪ್ಪ ಬಂಗೇರ, ಕೇಂದ್ರೀಯ ಘಟಕದ ಕೋಶಾಧಿಕಾರಿ, ಸಿಎ ಸುದೇಶ್ ರೈ, ಮೈಸಐರು ರಾಮಕೃಷ್ಣ ಹೌಸ್ ಬಿಲ್ಡಿಂಗ್ ಸೊಸೈಟಿಯ ನಿರ್ದೇಶಕ ವಿಟ್ಠಲ ಶೆಟ್ಟಿ ಮೈಸೂರು, ಪಿಲಾತಬೆಟ್ಟು ಗ್ರಾ. ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉದ್ಯಮಿ ಹರೀಂದ್ರ ಪೈ ನೈನಾಡು, ಟಸ್ಟ್ ಮಾರ್ಗದರ್ಶಕ ಮಹಾಬಲ ಶೆಟ್ಟಿ ಪಟ್ಲಗುತ್ತು, ಸರಪಾಡಿ ಘಟಕದ ಅಧ್ಯಕ್ಷ ಡಾ| ಬಾಲಚಂದ್ರ ಶೆಟ್ಟಿ, ಅನ್ನಳಿಕೆ ಫ್ರೆಂಡ್ಸ್ ಸಂಚಾಲಕ ರಾಮಚಂದ್ರ ಶೆಟ್ಟಿಗಾರ್ ಅನ್ನಳಿಕೆ,ಪಿಲಾತಬೆಟ್ಟು ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಕಾರಿ ಮಂಜಪ್ಪ ಮೂಲ್ಯ ಅತ್ತಾಜೆ, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಬಸವನಗುಡಿ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಮುಗೆರೋಡಿ, ಪುಂಜಾಲಕಟ್ಟೆ ಮಹಿಳಾ ಘಟಕದ ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ ಮುಗೆರೋಡಿ, ಅಧ್ಯಕ್ಷೆ ತುಳಸಿ ಹಾರಬೆ, ದೆಹಲಿ ಘಟಕದ ಕಾರ್ಯದರ್ಶಿ ಪೃಥ್ವಿ ಕಾರಿಂಜ, ಘಟಕ ಗೌರವಾಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಾಮದಪದವು, ರಂಗ ಕಲಾವಿದ ರತ್ನದೇವ್ ಶೆಟ್ಟಿ, ಘಟಕ ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಪ್ರ. ಕಾರ್ಯದರ್ಶಿ ಕಮಲ್ ಶೆಟ್ಟಿ ಬೊಳ್ಳಾಜೆ, ಕೋಶಾಧಿಕಾರಿ ದಿನಕರ ಶೆಟ್ಟಿ, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಹಿಮ್ಮೇಳದ ಹಿರಿಯ ಕಲಾವಿದರಾದ ವೆಂಕಟೇಶ್ ಶೆಟ್ಟಿ ಮೂರ್ಜೆ, ಯುವರಾಜ ಆಚಾರ್ಯ ಕಾವಳಕಟ್ಟೆ, ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲಗುತ್ತು ಅವರನ್ನು ಸನ್ಮಾನಿಸಲಾಯಿತು. ಪುಂಜಾಲಕಟ್ಟೆ ಘಟಕದ ವತಿಯಿಂದ ಕೇಂದ್ರೀಯ ಘಟಕಕ್ಕೆ ೫೦ ಸಾವಿರ ರೂ. ದೇಣಿಗೆಯನ್ನು ವಿತರಿಸಲಾಯಿತು.
ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಸ್ವಾಗತಿಸಿದರು. ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಂದಿಸಿದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ : ಪುಂಜಾಲಕಟ್ಟೆ ಘಟಕ ಉದ್ಘಾಟನೆ"