ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾಗಿರುವ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾಗುವ ಮಂಗಲಧಾಮಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಮಾಜದ ಉನ್ನತಿಗಾಗಿ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ರೀತಿ ಅಮೋಘವಾಗಿದೆ. ಶ್ರೀರಾಮ ಮತ್ತು ಶ್ರೀಕೃಷ್ಣ ದೇವರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಉನ್ನತಿಗಾಗಿ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ಸರಕಾರ ಮಠ, ಮಂದಿರಗಳನ್ನು ಸ್ವಾಽನಪಡಿಸಿಕೊಳ್ಳುವ ಹುನ್ನಾರವನ್ನು ಇಟ್ಟುಕೊಂಡಿದೆ. ಇದು ಹಿಂದೂ ಸಮಾಜದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕ್ರಮವಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ಈ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕು ಎಂದು ಅವರು ಹೇಳಿದರು.
ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಡಾ.ಕಮಲಾ ಪ್ರಭಾಕರ ಭಟ್, ಬಿ.ಸಿ.ರೋಡ್‌ನ ವೈದ್ಯ ಡಾ.ಎಂ.ಎಸ್.ಭಟ್, ಕುಪ್ಳುಚಾರು ಮರಿ ಭಟ್, ಕುಪ್ಳುಚಾರು ಡಾ.ಮರಿ ಭಟ್, ಮುಳ್ಳುಂಜ ವೆಂಕಟೇಶ್ವರ ಭಟ್, ಅಡ್ಕತ್ತಿಮಾರು ರಾಮಚಂದ್ರ ಭಟ್, ಕಲ್ಲಡ್ಕ ಹವ್ಯಕ ವಲಯ ದಿಗ್ದರ್ಶಕ ಕುದ್ಕುಳಿ ಕೃಷ್ಣ ಭಟ್ ಕೋಮಲೆ, ಕಾರ್ಯದರ್ಶಿ ಗಣೇಶ ಭಟ್, ಕೋಶಾಧಿಕಾರಿ ಎಸ್.ಎನ್.ಶ್ರೀಕಾಂತ್, ಸದಸ್ಯರಾದ ಶ್ಯಾಮ ಭಟ್ ಪಂಜಿಗದ್ದೆ, ಯತಿನ್ ಕುಮಾರ್ ಕಲ್ಲಡ್ಕ, ಡಾ.ಮನೋಜ್ ಕಲ್ಲಡ್ಕ, ಸತೀಶ ಪಂಜಿಗದ್ದೆ, ಮುರಳೀಕೃಷ್ಣ ಕುಕ್ಕಿಲ, ಈಶ್ವರ ಭಟ್ ಮನುಶ್ರೀ, ಡಾ.ಚಂದ್ರಶೇಖರ್, ಗೋಪಾಲಕೃಷ್ಣ ಭಟ್ ಮುಳಿಯ, ಬಾಲಕೃಷ್ಣ ಭಟ್, ಛತ್ರ ರಾಮ ಭಟ್, ಕುಪ್ಳುಚಾರು ಲಕ್ಷ್ಮೀ ಅಮ್ಮ, ಸಂಜೀವ ಮಾಡದಡಿ, ಮೆನೇಜರ್ ಬಾಲಸುಬ್ರಹ್ಮಣ್ಯ ಆರ್.ಕೆ. ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಉಮಾಶಿವ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಸ್ವಾಗತಿಸಿ, ವಂದಿಸಿದರು.
Be the first to comment on "ಉಮಾಶಿವ ಕ್ಷೇತ್ರದಲ್ಲಿ ಮಂಗಲಧಾಮಕ್ಕೆ ಶಂಕುಸ್ಥಾಪನೆ"