ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ೩೪ನೇ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 10ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 21 ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ವೇ| ಮೂ| ಕೃಷ್ಣಭಟ್ ಪೌರೋಹಿತ್ಯದಲ್ಲಿ ಮಾಂಗಲ್ಯಂ ತಂತು ನಾನೇನಾ… ಎಂಬ ಮಂತ್ರಘೋಷದೊಂದಿಗೆ ಮಾಂಗಲ್ಯಧಾರಣೆ ನಡೆಸಿದ ವಧು–ವರರು ನೆರೆದ ಗಣ್ಯರ, ಬಂಧುಮಿತ್ರರ ಸಮ್ಮುಖದಲ್ಲಿ ಹಸೆಮಣೆಗೇರಿದರು.
ಬಳಿಕ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್.ರವಿ ಅವರು ಉದ್ಘಾಟಿಸಿ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ, ಹೀಗಾಗಿ ಸರಕಾರವೂ ಸರಳ ಮದುವೆ, ಆದರ್ಶ ವಿವಾಹ ಹಾಗೂ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಆದರ್ಶ ವಿವಾಹಕ್ಕೆ ಒತ್ತು ನೀಡುವ ಮೂಲಕ ತುಂಗಪ್ಪ ಬಂಗೇರರ ನೇತೃತ್ವದ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮಾದರಿಯಾಗಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಮಾಜಿ ಶಾಸಕ ರುಕ್ಮಯ ಪೂಜಾರಿ, ರಾಜ್ಯ ಬಿಜೆಪಿ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ಉದ್ಯಮಿಗಳಾದ ಸುರೇಶ್ ಶೆಟ್ಟಿ ಮಿಜಾರು, ಪ್ರವೀಣ್ ಕುಮಾರ್ ಬಂಗೇರ, ನಿತ್ಯನಂದ ಪೂಜಾರಿ ಕೆಂತಲೆ, ಸುಂದರ್ರಾಜ್ ಹೆಗ್ಡೆ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ,ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಓಂ ಪ್ರಸಾದ್ ಬಿ.ಸಿ.ರೋಡ್, ಮುರಳಿ ಶೆಟ್ಟಿ ಮುಂಬಯಿ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ಶೆಟ್ಟಿ, ಲೋಕೇಶ್ ಆಚಾರ್ಯ, ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ಉಪಸ್ಥಿತರಿದ್ದರು.
ಕ್ಲಬ್ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಸ್ತಾವಿಸಿದರು.ಅಧ್ಯಕ್ಷ ಪ್ರಶಾಂತ್ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಕೋಶಾಧಿಕಾರಿ ರಾಜೇಶ್ ಪಿ. ಬಂಗೇರ, ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಡಾ. ಎಂ.ಜೆ. ಪ್ರವೀಣ್ ಭಟ್(ಧಾರ್ಮಿಕ), ಡಾ. ಸುರೇಂದ್ರನಾಥ ನಾಯಕ್-(ವೈದ್ಯಕೀಯ)ವಿಶ್ವೇಶ್ವರ ಭಟ್ ಸುಣ್ಣಂಬಳ(ಯಕ್ಷಗಾನ ಕ್ಷೇತ್ರ), ವಸಂತ್ ಶೆಟ್ಟಿ-(ಉದ್ಯಮ), ನಿತಿನ್ ಪೂಜಾರಿ(ಕ್ರೀಡೆ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಹಾಗೂ ಹರೀಂದ್ರ ಪೈ(ಉದ್ಯಮ), ಮೌನೇಶ್ ವಿಶ್ವಕರ್ಮ -(ಪತ್ರಿಕೋದ್ಯಮ),ಮಹಮ್ಮದ್ ರಫೀಕ್(ಸಮಾಜ ಸೇವೆ), ನಾರಾಯಣ ನಾಯಕ್ ಕರ್ಪೆ(ಸಮಾಜ ಸೇವೆ), ಎಂ. ಕ್ರಿಶ್ ಕುಮಾರ್(ಕಲೆ), ಕು.ರಮ್ಯಶ್ರೀ ಜೈನ್(ಕ್ರೀಡೆ), ಶಬನಾ ಬಾನು (ಶಿಕ್ಷಣ) ಪ್ರದೀಪ್ ನಾಯಕ್(ಸಮಾಜ ಸೇವೆ) ಅವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಅವರು ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಉಚಿತ ಸಾಮೂಹಿಕ ಮದ್ವೆಯಲ್ಲಿ 21 ಜೋಡಿ ಹಸೆಮಣೆಗೆ"