ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಮಂಚಿ – ಕೊಳ್ನಾಡು ಮತ್ತು ಗಮಕ ಕಲಾ ಪರಿಷತ್ತು ಸಹಯೋಗದಲ್ಲಿ ಬಂಟ್ವಾಳ ತಾಲೂಕು ಗಮಕ ಮೊದಲ ಸಮ್ಮೇಳನ ಮಾರ್ಚ್11ರಂದು ಭಾನುವಾರ ಬೆಳಗ್ಗೆ 9.30ರಿಂದ ಸಂಜೆ 4ವರೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.
ಸಮ್ಮೇಳನ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯ ಮತ್ತು ಕಸಾಪ ಬಂಟ್ವಾಳ ಘಟಕ ಅಧ್ಯಕ್ಷ ಕೆ.ಮೋಹನ ರಾವ್ ಜಂಟಿಯಾಗಿ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಕಲ್ಲೂರಾಯ, ಎಳೆಯರ ಗೆಳೆಯ ಶ್ರೀ ಮುಳಿಯ ಶಂಕರ ಭಟ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಗಮಕಿ ಗಣಪತಿ ಪದ್ಯಾಣ, ವೆಂಕಟ್ರಾಯ ಪ್ರಭು ಕಲ್ಲಡ್ಕ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ನಡೆಯುವ ಮೊದಲ ಗೋಷ್ಠಿಯಲ್ಲಿ ಧಾರ್ಮಿಕ ಜಾಗೃತಿಯಲ್ಲಿ ಗಮಕ ಎಂಬ ವಿಷಯದ ಬಗ್ಗೆ ಉಪನ್ಯಾಸಕಿ ಕೆ.ಆರ್.ಸುವರ್ಣಕುಮಾರಿ ಹಾಗೂ ಎರಡನೇ ಗೋಷ್ಟಿಯಲ್ಲಿ ಶಾಲಾ-ಕಾಲೇಜ್ ಗಳಲ್ಲಿ ಗಮಕ ಎಂಬ ವಿಷಯದ ಬಗ್ಗೆ ಉಪನ್ಯಾಸಕ ಕೆ.ಉದಯಕುಮಾರ್ ವಿಚಾರ ಮಂಡಿಸಲಿದ್ದಾರೆ ಎಂದು ಹೇಳಿದರು.
ಕುಕ್ಕಾಜೆ ಮಂಜುಳಾ ಸುಬ್ರಹ್ಮಣ್ಯ ಭಟ್ ಮತ್ತು ಶಿಷ್ಯರಿಂದ ಗಮಕ ರೂಪಕ, ಗಮಕಿ ಗಣಪತಿ ಭಟ್ ಅವರಿಂದ ಗಮಕ ಕಾರ್ಯಕ್ರಮ, ಬ್ರಹ್ಮಾವರ ಚಂದ್ರಶೇಖರ ಕೆದಿಲಾಯ ಅವರಿಂದ ಗಮಕ ಶಿಖರ ,ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಉಪಾಧ್ಯಕ್ಷ ಎಚ್. ಸುಂದರ ರಾವ್ ತಾಲೂಕು ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ , ಕನ್ನಡಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಗಂಗಾಧರ ಭಟ್ ಕೊಳಕೆ ಉಪಸ್ಥಿತರಿದ್ದರು.
Be the first to comment on "11ರಂದು ಬಂಟ್ವಾಳ ತಾಲೂಕು ಗಮಕ ಪ್ರಥಮ ಸಮ್ಮೇಳನ"