ಕಳೆದ ವರ್ಷ ಹತ್ಯೆಗೀಡಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಮತ್ತು ತಾಯಿ ನಳಿನಿ ಸೋಮವಾರ ಬಂಟ್ವಾಳ ತಾಲೂಕಿಗೆ ಪ್ರವೇಶಿಸಿದ ಸಂದರ್ಭ, ಕ್ಷೇತ್ರದಲ್ಲಿ ಸಾಗುವ ಪಾದಯಾತ್ರೆಗೆ ಪಕ್ಷ ಮುಖಂಡರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಕೊಡಗಿನ ಕುಶಾಲನಗರದಿಂದ ಹೊರಟ ಬಿಜೆಪಿಯ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಸೋಮವಾರ ಮಾಣಿ ಮೂಲಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರವನ್ನು ಪ್ರವೇಶಿಸಿತು.
ರಾಷ್ಟ್ರೀಯ ಹೆದ್ದಾರಿಯ ಮೇಲ್ಕಾರ್ ನಲ್ಲಿ ಪಾದಯಾತ್ರೆಗೆ ಆರ್.ಎಸ್.ಎಸ್.ಕಾರ್ಯಕರ್ತ ದಿ. ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ, ತಾಯಿ ನಳಿನಿ ಶರತ್ ನ ಭಾವಚಿತ್ರಕ್ಕೆ ಹಾರಾರ್ಪಣೆಗೈದು, ಪಕ್ಷದ ದ್ವಜವನ್ನು ಬಿಜೆಪಿ ಮುಖಂಡರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು ಹಾಗೂ ಬಿ. ದೇವದಾಸ ಶೆಟ್ಟಿ ಅವರಿಗೆ ಹಸ್ತಾಂತರಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ಬಳಿಕ ಯಾತ್ರೆ ಬಿ.ಸಿ.ರೋಡಿನ ರಾಜರಸ್ತೆಯಲ್ಲಿ ಸಂಚರಿಸಿ ಉದ್ಯಾನವನದ ಪಕ್ಕದ ಸ್ಪರ್ಶಾ ಕಲಾಮಂದಿರದಲ್ಲಿ ಸಂಪನ್ನ ಗೊಂಡಿತು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಕ್ಷೇತ್ರ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು, ರಾಜ್ಯ ಸಹವಕ್ತಾರೆ ಸುಲೋಚನಾ ಭಟ್, ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ, ಜೀತೆಂದ್ರ ಕೊಟ್ಟಾರಿ, ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ,ಪ್ರಮುಖರಾದ ಜಿ.ಆನಂದ, ಸತ್ಯಜಿತ್ ಸುರತ್ಕಲ್, ಮೋನಪ್ಪ ಭಂಡಾರಿ, ಸಚ್ಚಿದಾನಂದ ಶೆಟ್ಟಿ ಮುಂಬೈ, ದಿನೇಶ್ ಭಂಡಾರಿ, ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಆನಂದ ಶಂಭೂರು, ಸೀತಾರಾಮ ಪೂಜಾರಿ ,ರಮಾನಾಥ. ರಾಯಿ, ಗಣೇಶ್ ರೈ ಮಾಣಿ ಮೊದಲಾದವರಿದ್ದರು.
Be the first to comment on "ಜನಸುರಕ್ಷಾ ಯಾತ್ರೆ ಬಂಟ್ವಾಳ ಸಂಚಾರಕ್ಕೆ ಚಾಲನೆ ನೀಡಿದ ಶರತ್ ಹೆತ್ತವರು"