ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಆಡಳಿತಕ್ಕೊಳಪಟ್ಟ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರ ನೂತನ ಶಿಲಾವಿಗ್ರಹ ಮತ್ತು ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ನವಗ್ರಹರ ಪುನ:ಪ್ರತಿಷ್ಠೆ ಹಿನ್ನೆಲೆಯಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಭಾನುವಾರ ಮಾ.೪ರಂದು ನಡೆಯಿತು.
ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಯಿತು. ಬೆಳಗ್ಗೆ ೯.೩೦ರಿಂದ ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ೧೧ರಿಂದ ಭದ್ರತಾ ಕೊಠಡಿ ಉದ್ಘಾಟನೆ ಮತ್ತು ಧಾರ್ಮಿಕ ಉಪನ್ಯಾಸ ನಡೆದವು. ದಾಬೋಲಿ ಸಂಸ್ಥಾನದ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಆಡಳಿತ ಮೊಕ್ತೇಸರರಾದ ಕಲ್ಲೇಗ ಸಂಜೀವ ನಾಯಕ್, ಆನುವಂಶಿಕ ಮೊಕ್ತೇಸರ ಕಂಟೀಕ ಗೋಪಾಲ ಶೆಣೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಲ್ಲಗುಡ್ಡೆ ರಾಜಾರಾಮ ಪ್ರಭು, ಪ್ರಧಾನ ಕಾರ್ಯದರ್ಶಿ ಕಂಟೀಕ ಶಾಂತಾರಾಮ ಶೆಣೈ, ಉಪಾಧ್ಯಕ್ಷರಾದ ಬೋಳಿಯಾರು ಯೋಗೀಶ್ ನಾಯಕ್, ಪ್ರವೀಣ್ ಎಸ್. ದರ್ಬೆ, ಕಾರ್ಯದರ್ಶಿಗಳಾದ ಮರೋಳಿ ಗಣೇಶ್ ಶೆಣೈ, ದಯಾನಂದ ಪ್ರಭು, ಲೆಕ್ಕಪರಿಶೋಧಕರಾದ ಕೆಂಚಪಾಲು ಬಾಲಕೃಷ್ಣ ಪ್ರಭು, ಮಾರ್ಗದರ್ಶಕರಾದ ಕಂಟೀಕ ಅನಂತ ಶೆಣೈ, ಡೆಜ್ಜಾರು ಗಣಪತಿ ಶೆಣೈ, ಆಡಳಿತ ಸಮಿತಿಯ ಕಾರ್ಯನಿರ್ವಾಹಕ ಮೊಕ್ತೇಸರರಾದ ರಾಮ್‌ಗಣೇಶ್ ಪ್ರಭು, ಆರ್ಥಿಕ ಕಾರ್ಯನಿರ್ವಾಹಕ ಮೊಕ್ತೇಸರರಾದ ಪ್ರಭಾಕರ ನಾಯಕ್ ದರ್ಬೆ ಸಹಿತ ಮೊಕ್ತೇಸರರು, ಉತ್ಸವ ಸಮಿತಿ ಪ್ರಮುಖರು ಭಕ್ತರು ಉಪಸ್ಥಿತರಿದ್ದರು.
Be the first to comment on "ಕಶೆಕೋಡಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ"