ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್ತು, ತಾಲೂಕು ಆಡಳಿತ, ಪುರಸಭೆ ಬಂಟ್ವಾಳ, ಲಯನ್ಸ್ ಕ್ಲಬ್ ಲೊರೆಟ್ಟೋ ಅಗ್ರಾರ್, ಲಯನ್ಸ್ ಕ್ಲಬ್ ಬಂಟ್ವಾಳ, ಕಥೋಲಿಕ್ ಸಭಾ ಬಂಟ್ವಾಳ ವತಿಯಿಂದ ಪ್ಲಾಸ್ಟಿಕ್ ಮುಕ್ತ ಬಂಟ್ವಾಳ ಅಭಿಯಾನ ಮತ್ತು ದ.ಕ.ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪಡೆದುಕೊಂಡಿತು.
ಹಸಿರು ಶಾಲೆಗಳಾಗಿ ಕಡೇಶಿವಾಲಯ ಹಿ.ಪ್ರಾ.ಶಾಲೆ, ಪುತ್ತೂರು ಶಾಂತಿಗೋಡಿನ ಆನಡ್ಕ ಹಿರಿಯ ಪ್ರಾ.ಶಾಲೆ, ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಇರ್ದೆ ಉಪ್ಪಳಿಗೆ ಸರ್ಕಾರಿ ಪ್ರೌಢಶಾಲೆ, ಸುಳ್ಯ ತಾಲೂಕಿನ ಎಣ್ಣೆಮಜಲು ಸ.ಕಿ.ಪ್ರಾ.ಶಾಲೆ, ಬಂಟ್ವಾಳ ತಾಲೂಕಿನ ಸುರಿಬೈಲು ಉ.ಹಿ.ಪ್ರಾ.ಶಾಲೆ, ಪುತ್ತೂರು ತಾಲೂಕಿನ ಬಿಳಿನೆಲೆ ದ.ಕ.ಜಿಪಂ ಉನ್ನತ ಹಿ.ಪ್ರಾ.ಶಾಲೆ, ಪುತ್ತೂರು ತಾಲೂಕಿನ ಏಕತ್ತಡ್ಕ ಉ.ಹಿ.ಪ್ರಾ.ಶಾಲೆ, ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರು ಹಿ.ಪ್ರಾ.ಶಾಲೆ, ಸಿದ್ಧಕಟ್ಟೆ ಪ್ರೌಢಶಾಲೆ, ಸುಳ್ಯ ತಾಲೂಕಿನ ದೇವರಕಾನ ಹಿ.ಪ್ರಾ.ಶಾಲೆ, ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸರ್ಕಾರಿ ಪ್ರೌಢಶಾಲೆ, ಪುತ್ತೂರು ತಾಲೂಕಿನ ರೆಂಜಿಲಾಡಿ ಹಿ.ಪ್ರಾ.ಶಾಲೆ, ಪುತ್ತೂರು ತಾಲೂಕಿನ ಕುದ್ಮಾರು ಹಿ.ಪ್ರಾ.ಶಾಲೆ, ಪುಣಚ ಗ್ರಾಮದ ದಂಬೆ ಸ.ಹಿ.ಪ್ರಾ.ಶಾಲೆ, ಮಜಿ ವೀರಕಂಭದ ಹಿ.ಪ್ರಾ.ಶಾಲೆ, ಬೆಳ್ತಂಗಡಿ ತಾಲೂಕಿನ ಅಂಟೆಮಜಲು ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಚೆನ್ನಾವರ ಕಿ.ಪ್ರಾ.ಶಾಲೆ, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆ, ಸರಪಾಡಿ ಹೈಸ್ಕೂಲು, ಕಲ್ಲಡ್ಕ ನೆಟ್ಲದ ಸ.ಹಿ.ಪ್ರಾ.ಶಾಲೆ ಹಸಿರು ಶಾಲೆ ಪ್ರಶಸ್ತಿ ಪಡೆದವು.
ಬಂಟ್ವಾಳ ಮಿನಿ ವಿಧಾನಸೌಧ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಬಿ.ರಮಾನಾಥ ರೈ ಪ್ರಶಸ್ತಿ ನೀಡಿ ಮಾತನಾಡಿ, ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೆಲವರಿಗೆ ಅಪಥ್ಯವಾಗಬಹುದು. ಆದರೆ ಪ್ರಕೃತಿ ಉಳಿಸಲು ಇದು ಅನಿವಾರ್ಯ, ಎಲ್ಲರೂ ಇದನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾಪಂ ಸದಸ್ಯರಾದ ಉಸ್ಮಾನ್ ಕರೋಪಾಡಿ, ಮಲ್ಲಿಕಾ ಶೆಟ್ಟಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ತಹಶೀಲ್ದಾರ್ ಪುರಂದರ ಹೆಗ್ಡೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಲಯನ್ಸ್ ಕ್ಲಬ್‌ನ ವಿವಿಧ ಘಟಕಗಳ ಅಧ್ಯಕ್ಷರಾದ ರೋಯ್ ಕಾರ್ಲೊ, ಜಗದೀಶ ಎಡಪಡಿತ್ತಾಯ, ಕಥೋಲಿಕ್ ಸಭಾ ವಲಯ ಸಮಿತಿ ಅಧ್ಯಕ್ಷ ಸ್ಟಾನಿ ಲೋಬೊ, ವಿಜ್ಞಾನ ಪರಿಷತ್ತು ಅಧ್ಯಕ್ಷ ಅಬುಬಕ್ಕರ್ ಆರ್‍ಲಪದವು ಉಪಸ್ಥಿತರಿದ್ದರು.
ಜಯಪ್ರಕಾಶ್ ನಾಯಕ್ ಬಹುಮಾನಿತರ ಪಟ್ಟಿ ವಾಚಿಸಿದರು. ಬಂಟ್ವಾಳ ತಾಲೂಕಿನ 9 ಶಾಲೆಗಳು ಹಸಿರು ಶಾಲೆ ಸಹಿತ ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಭಾಜನವಾಗಿದ್ದು, ಬಿಇಒ ಶಿವಪ್ರಕಾಶ್ ಪುರಸ್ಕಾರ ಸ್ವೀಕರಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಬಿ.ಸಿ.ರೋಡಿನ ಪೊಳಲಿ ಕೈಕಂಬ ದ್ವಾರದಿಂದ ನಡೆದ ಪ್ಲಾಸ್ಟಿಕ್ ಮುಕ್ತ ಬಂಟ್ವಾಳ ಅಭಿಯಾನ ಜಾಥಾವನ್ನು ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಅದಾದ ಬಳಿಕ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಸಮಾವೇಶಗೊಂಡ ಜಾಥಾದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆ ಕುರಿತು ನೃತ್ಯನಾಟಕ, ಬೀದಿ ನಾಟಕ ಪ್ರದರ್ಶಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಸ್ವಚ್ಛತಾ ರಾಯಭಾರಿ ಎನ್.ಶೀನ ಶೆಟ್ಟಿ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಪ್ಲಾಸ್ಟಿಕ್ ದುಷ್ಪರಿಣಾಮ ಕುರಿತು ಡಾ.ಅರುಣ್ ಎಂ.ಇಸ್ಲೂರ್ ಮಾಹಿತಿ ನೀಡಿದರು. ಬಳಿಕ ಬಂಟ್ವಾಳ ತಾಲೂಕಿನ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಹಕ್ಕುಪತ್ರಗಳನ್ನು ಸಚಿವ ರೈ ವಿತರಿಸಿದರು.
Be the first to comment on "ದ.ಕ.ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ"